ಸಿರಿಬಾಗಿಲು ಪ್ರತಿಷ್ಠಾನ: ದೇಶ ಮಂಗಲ ಕೃಷ್ಣ ಕಾರಂತರ ಸಂಸ್ಮರಣೆ
ಕಾಸರಗೋಡು: ಅ.18 ರಂದು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ದೇಶಮಂಗಲ ದಿ| ಕೃಷ್ಣ ಕಾರಂತರ ಸಂಸ್ಮರಣಾ ಕಾರ್ಯಕ್ರಮ ನಡೆಯಲಿದೆ.
ಕೃಷ್ಣ ಕಾರಂತರ 108ನೇ ಜನ್ಮದಿನದ ಪ್ರಯುಕ್ತ ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10 ಗಂಟೆಗೆ ಶೇಣಿ ಮುರಳಿ ಇವರಿಂದ ಹರಿಕಥಾ ಕಾರ್ಯಕ್ರಮ,11-30 ಕ್ಕೆ ರಾಧಾಕೃಷ್ಣ ಕೆ. ಉಳಿಯತಡ್ಕ ಇವರಿಂದ ದೇಶಮಂಗಲ ಕಾರಂತರ ಸಂಸ್ಕರಣೆ. ಆ ಬಳಿಕ ಕೆ. ಆರ್.ಆಳ್ವ ಕಂಬಾರು ಇವರ ಅಧ್ಯಕತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ನಾರಾಯಣ ರಂಗಾಭಟ್ಟ ಮಧೂರು ಜ್ಯೋತಿಷ್ಯರು ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೃಷ್ಣ ಶರ್ಮ ನಿವೃತ್ತ ಮುಖ್ಯೋಪಾಧ್ಯಾಯರು ಕುಕ್ಕೆ ಸುಬ್ರಹ್ಮಣ್ಯ, ಉಮೇಶ ಶಿರೂರು ಫಣಿಯಪ್ಪಯ್ಯ ಪ್ರತಿಷ್ಠಾನ, ಬೈಂದೂರು, ಶ್ರೀಧರ ಶೆಟ್ಟಿ ಮುಟ್ಟಂ,ಗೋಪಾಲ ಶೆಟ್ಟಿ ಅರಿಬೈಲು ಮುಂತಾದವರು ಭಾಗವಹಿಸಲಿದ್ದಾರೆ.
ಮದ್ಯಾಹ್ನ 2-30 ರಿಂದ ಪ್ರತಿಷ್ಠಾನದ ಸಂಯೋಜನೆಯಲ್ಲಿ ಪ್ರಸಿದ್ಧ ಕಲಾವಿದರಿಂದ ಭೀಷ್ಮವಿಜಯ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ತೆಂಕು ಬಡಗು ಖ್ಯಾತಿಯ ರಾಘವೇಂದ್ರ ಮಯ್ಯ ಹಾಲಾಡಿ ಭಾಗವತರಾಗಿ ಭಾಗವಹಿಸಲಿದ್ದಾರೆ. ರಾಧಾಕೃಷ್ಣ ಕಲ್ಚಾರ್, ಉಜಿರೆ ಅಶೋಕ್ ಭಟ್, ಸರ್ಪಂಗಳ ಈಶ್ವರ ಭಟ್ ,ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಶ್ರೀ ವೈಕುಂಠ ಹೇರ್ಳೆ ಸಾಸ್ತಾನ ಮುಂತಾದ ಕಲಾವಿದರು ತಾಳ ಮದ್ದಳೆಯಲ್ಲಿ ಭಾಗವಹಿಸಲಿದ್ದಾರೆ.
ಡಾ.ರಮಾನಂದ ಬನಾರಿ
ಗಡಿನಾಡು ಕಾಸರಗೋಡಿನ ಖ್ಯಾತವೈದ್ಯರೂ, ಯಕ್ಷಗಾನ ತಾಳಮದ್ದಳೆಯ ಪ್ರಬುದ್ಧ ಅರ್ಥದಾರಿಗಳೂ, ಉತ್ತಮ ಸಾಹಿತಿಗಳೂ, ಸಂಶೋಧಕರೂ ಆಗಿರುವ ,ಕಾಸರಗೋಡಿನ ಕನ್ನಡ ಪರ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು , ಸಮಾಜಮುಖಿಯಾಗಿ ಕಾರ್ಯಗಳಿಂದ ಜನಪ್ರಿಯರಾಗಿರುವ ಮುತ್ಸದ್ದಿ ಡಾ.ರಮಾನಂದ ಬನಾರಿ ಯವರಿಗೆ ಗಣ್ಯರ ಉಪಸ್ಥಿತಿಯಲ್ಲಿ ದೇಶಮಂಗಲ ಕೃಷ್ಣ ಕಾರಂತರ ಸಂಸ್ಮರಣೆಯೊಂದಿಗೆ ಗೌರವ ಪುರಸ್ಕಾರ ನೀಡಲಾಗುವುದು ಎಂದು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಕಟಣೆ ಮೂಲಕ ತಿಳಿಸಿದೆ.