ಸೀತಾಂಗೋಳಿ: ಟೆರೇಸ್ ಮೇಲೆ ಮಲಗಿದ್ದ ವ್ಯಕ್ತಿ ಕೆಳಗೆ ಬಿದ್ದು ಮೃತ್ಯು

Update: 2023-08-19 10:37 GMT

ಕಾಸರಗೋಡು, ಆ.19: ವಾಸವಿದ್ದ ಕ್ವಾರ್ಟರ್ಸ್ ಕಟ್ಟಡದ ಟೆರೇಸ್ ಮೇಲಿನಿಂದ ಬಿದ್ದು ವಲಸೆ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಸೀತಾಂಗೋಳಿಯಲ್ಲಿ ನಡೆದಿದೆ.

ರಾಜಸ್ತಾನ ಬೋಡಗಾನ್ ನಿವಾಸಿ ಕೇಮ್ರಾಜ್ ಗುಜ್ಜರ್ (43) ಮೃತಪಟ್ಟವರು.

ಕಳೆದ 20 ವರ್ಷಗಳಿಂದ ಸೀತಾಂಗೋಳಿಯಲ್ಲಿ ಗ್ರಾನೈಟ್ ಮಾರ್ಬಲ್ ಕೆಲಸ ನಿರ್ವಹಿಸುತ್ತಿದ್ದ ಇವರು ಸೀತಾಂಗೋಳಿ ಪೇಟೆಯಲ್ಲಿ ರುವ ಕ್ವಾರ್ಟಸ್ ನಲ್ಲಿ ವಾಸಿಸುತ್ತಿದ್ದರು. ಶುಕ್ರವಾರ ರಾತ್ರಿ ಇವರು ಕ್ವಾರ್ಟಸ್ ನ ಟೆರೇಸ್ ಮೇಲೆ ನಿದ್ರಿಸುತ್ತಿದ್ದರು. ಶನಿವಾರ ಮುಂಜಾನೆ ಜತೆಗಿದ್ದವರು ಎದ್ದು ನೋಡಿದಾಗ ಕೇಮ್ರಾಜ್ ಗುಜ್ಜರ್ ಕ್ವಾರ್ಟಸ್ ನಿಂದ ಕೆಳಗೆ ಬಿದ್ದು ಮೃತಪಟ್ಟಿರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಕೇಮ್ರಾಜ್ ಅವರ ಸಹೋದರ ಎಮ್ರಾಜ್ ಕೂಡಾ ಸೀತಾಂಗೋಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇವರು ಜತೆಯಾಗಿ ವಾಸಿಸುತ್ತಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಾಸರಗೋಡು ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News