ಸೋಮವಾರಪೇಟೆ : ನಾಪತ್ತೆಯಾಗಿದ್ದ ವ್ಯಕ್ತಿ ಮೃತ್ಯು; ಕಾಡಾನೆ ದಾಳಿ ಶಂಕೆ

Update: 2025-01-14 16:29 GMT

ಮಡಿಕೇರಿ: ಕಾಡಾನೆ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸೋಮವಾರಪೇಟೆ ತಾಲೂಕಿನ ಯಡವನಾಡು ಗ್ರಾಮದ ಕೂಪಾಡಿ ಹಾಡಿ ವ್ಯಾಪ್ತಿಯಲ್ಲಿ ನಡೆದಿದೆ.

ಹಾಡಿಯ ನಿವಾಸಿ ಜೇನು ಕುರುಬರ ತಮ್ಮು (64) ಮೃತ ವ್ಯಕ್ತಿ.

ಅವಿವಾಹಿತರಾಗಿರುವ ಇವರು ಕುರಿ ಮೇಯಿಸಿಕೊಂಡು ಜೀವನ ಸಾಗಿಸುತ್ತಿದ್ದರು. ರವಿವಾರ ಎಂದಿನಂತೆ ಕುರಿ ಮೇಯಿಸಲೆಂದು ಹೋದವರು ಮರಳಿ ಹಾಡಿಗೆ ಬಂದಿರಲಿಲ್ಲ. ಸುತ್ತಮುತ್ತಲೆಲ್ಲ ಹುಡುಕಾಟ ನಡೆಸಿದರೂ ತಮ್ಮು ಅವರ ಸುಳಿವು ದೊರೆತಿರಲಿಲ್ಲ. ಮಂಗಳವಾರ ಕೂಪಾಡಿ ಹಾಡಿಯಿಂದ ಸ್ವಲ್ಪ ದೂರದ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದ್ದು, ಇದು ಕಾಡಾನೆ ದಾಳಿಯಿಂದ ಮೃತಪಟ್ಟಿರುವುದಾಗಿ ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಸಂಜೆ ಸ್ಥಳ ಪರಿಶೀಲನೆ ನಡೆಸಿ ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News