ದೇವೇಗೌಡ ಅವರನ್ನು ಪ್ರಧಾನಿ, ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ದೇ ಕಾಂಗ್ರೆಸ್, ಉಪಕಾರ ಸ್ಮರಣೆ ಇರಬೇಕಾಗಿತ್ತು: ಡಿ.ಕೆ. ಶಿವಕುಮಾರ್

Update: 2024-04-04 15:51 GMT

ಕೋಲಾರ: ಎಚ್.ಡಿ. ದೇವೇಗೌಡರನ್ನು ಪ್ರಧಾನಿ ಮಾಡಿದ್ದು, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್ ಪಕ್ಷ, ಊಟ ಕೊಟ್ಟ ರಾಮನಗರ, ಚಿಕ್ಕಬಳ್ಳಾಪುರ, ಚನ್ನಪಟ್ಟಣ, ಈಗ ಮಂಡ್ಯ ಬೇಕಂತೆ ಇವರಿಗೆ ಸ್ವಲ್ಪವಾದರೂ ಉಪಕಾರ ಸ್ಮರಣೆ ಇರಬೇಕಾಗಿತ್ತು ಎಂದು ಡಿಸಿಎಂ ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟರು.

ಕೋಲಾರದಲ್ಲಿ ಗುರುವಾರ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಪರವಾಗಿ ಮತಯಾಚನೆ ಮಾಡಲು ರೋಡ್ ನಡೆಸಿದ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕುಮಾರಸ್ವಾಮಿ ಅವರು ತೆನೆಯನ್ನು ಕೆಳಗಿಸಿ, ತಮ್ಮ ಸ್ವಂತ ಭಾವನನ್ನೇ ಕಮಲದ ಚಿನ್ಹೆಯ ಮೇಲೆ ಕಣಕ್ಕಿಳಿದಿದ್ದಾರೆ, ಇನ್ನು ಜೆಡಿಎಸ್ ಪಕ್ಷ ಎಲ್ಲಿದೆ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.

ಕೋಲಾರದಲ್ಲಿ ತೆನೆ ಬೇಕಂತೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಮಲ ಬೇಕಂದರೆ ಏನು ಅರ್ಥ ಎಂದು ಪ್ರಶ್ನಿಸಿದ ಅವರು, ತಮ್ಮ ಸ್ವಂತ ಭಾವನನ್ನೇ ಕಮಲದ ಚಿನ್ಹೆಯ ಮೇಲೆ ನಿಲ್ಲಿಸಿದ್ದಾರೆ, ಇದಕ್ಕಿಂತ ಅವಮಾನ ಬೇರೊಂದು ಇಲ್ಲ ಎಂದು ಲೇವಡಿ ಮಾಡಿದರು.

ವಿಧಾನಸಭಾ ಚುನಾವಣೆಯಂತೆಯೇ ಈಗಿನ ಲೋಕಸಭಾ ಚುನಾವಣೆ ಫಲಿತಾಂಶ ಬರಲಿದೆ. ಚುನಾವಣೆ ನಂತರ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ಹಗಲು ಕನಸು ಕಾಣುತ್ತಿದೆ ಎಂದು ಕುಟುಕಿದ ಅವರು, ನುಡಿದಂತೆ ನಡೆಯುವ, ನಡೆಯುವಂತೆ ನುಡಿಯುವ ಪಕ್ಷ ಕಾಂಗ್ರೆಸ್, ತಮ್ಮ ಅಮೂಲ್ಯ ಮತವನ್ನು ಕಾಂಗ್ರೆಸ್ ಪಕ್ಷದ ಕೈ ಚಿನ್ಹೆಗೆ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News