ಎಂಎಸ್ಐಎಲ್ ಬಾರ್ ಮುಚ್ಚಲು ಆಗ್ರಹ: ಕೋಲಾರ ಬೆಗ್ಲಿ ಬೆಣಜೇನಹಳ್ಳಿಯಲ್ಲಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

Update: 2024-04-26 07:02 GMT

ಕೋಲಾರ, ಎ.26: ತಾಲೂಕಿನ ಬೆಗ್ಲಿ ಬೆಣಜೇನಹಳ್ಳಿಯಲ್ಲಿ ಆರಂಭಿಸಲಾಗಿರುವ ಎಂಎಸ್ಐಎಲ್ ಸರಕಾರಿ ಮದ್ಯದಂಗಡಿಯನ್ನು ಮುಚ್ಚುವಂತೆ ಆಗ್ರಹಿಸಿ, ಗ್ರಾಮಸ್ಥರು ಲೋಕಸಭಾ ಚುನಾವಣೆಯನಲ್ಲಿ ಮತದಾನ ಬಹಿಷ್ಕರಿಸಿ ಪ್ರತಿಭಟನೆ ಮಾಡಿದರು.

ಗ್ರಾಮದ ಕೂಗಳತೆ ದೂರದಲ್ಲಿ ತೆರೆದಿರುವ ಎಂಎಸ್ಐಎಲ್ ಬಾರ್ ಮುಚ್ಚುವಂತೆ ಪಟ್ಟು ಹಿಡಿದಿದ್ದಾರೆ, ಸ್ಥಳಕ್ಕೆ ಆಗಮಿಸಿರುವ ಅಧಿಕಾರಿಗಳು ಕಡ್ಡಾಯ ಮತದಾನಕ್ಕೆ ಗ್ರಾಮಸ್ಥತರ ಮನವೊಲಿಕೆ ಮಾಡುವಲ್ಲಿ ವಿಫಲವಾದರು.

ಎಂಎಸ್ಐಎಲ್ ಗೆ ಅನುಮತಿ ನೀಡದಂತೆ ಒತ್ತಾಯಿಸಿ ಗ್ರಾಮಸ್ಥರು ಈ ಹಿಂದೆಯೂ ಅಬಕಾರಿ ಇಲಾಖೆ ಮುಂದೆ ಧರಣಿ ನಡೆಸಿದ್ದರು.

ಬೆಗ್ಲಿ ಬೆಣಜೇನಹಳ್ಳಿ ಗ್ರಾಮದಲ್ಲಿ ಸುಮಾರು 540 ಮತದಾರರಿದ್ದು, ಯಾರು ಹಕ್ಕು ಚಲಾವಣೆಗೆ ಮುಂದಾಗಿಲ್ಲ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News