ಕೋಲಾರ: ಬಾಲಕಿ ಮೇಲೆ ಅತ್ಯಾಚಾರ; ಯುವಕನ ಬಂಧನ

Update: 2024-08-18 07:34 GMT

ಮುಳಬಾಗಿಲು:  ಯುವಕನೊಬ್ಬ ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ಮುಳಬಾಗಿಲು ತಾಲ್ಲೂಕಿನ ಗ್ರಾಮವೊಂದರಲ್ಲಿ ಶನಿವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ.

ಆರೋಪಿ ಹಾಗೂ ಸಂತ್ರಸ್ತ ಬಾಲಕಿ ಒಂದೇ ಗ್ರಾಮದವರು. ಎಲ್ಲಾದರೂ ಗಾರೆ ಕೆಲಸ ಇದೆಯೇ ಎಂದು ಕೇಳಲು ಯುವಕನು ಬಾಲಕಿಯ ಮನೆಗೆ ಹೋಗಿದ್ದಾನೆ. ನಂತರ ಕೆಲಸದ ವಿಚಾರವಾಗಿ ಆಕೆಯ ತಂದೆ ಜೊತೆ ಹೊರ ಹೋಗಿದ್ದಾನೆ. ಹೊರ ಹೋದ ಯುವಕ ಪುನಃ ಬಂದು ಮಗಳಿಗೆ ಮೊಬೈಲ್ ತೋರಿಸುತ್ತಾ ಮನೆಯ ಮೇಲೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿ ಓಡಿ ಹೋಗಿದ್ದಾನೆ ಎಂದು ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

 ಬಾಲಕಿ ಗ್ರಾಮದ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿದ್ದಾಳೆ. ಬಾಲಕಿಗೆ ರಕ್ತಸ್ರಾವವಾಗಿದ್ದು, ಚಿಕಿತ್ಸೆಗಾಗಿ ಮುಳಬಾಗಿಲು ನಗರದ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಯುವಕನನ್ನು ಬಂಧಿಸಿದ ಮುಳಬಾಗಿಲು ಪೊಲೀಸರು, ಪೋಕ್ಸೊ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News