ಕೋಲಾರ: ಅಂಜುಮನ್ ಇಸ್ಲಾಮಿಯಾ ವತಿಯಿಂದ ಸಾರ್ವಜನಿಕ ಸೀರತ್ ಸಮಾವೇಶ

Update: 2024-09-17 11:14 GMT

ಕೋಲಾರ: ಪ್ರವಾದಿಯವರ ಆಜ್ಞೆ, ಆದೇಶಗಳನ್ನು ಮೈಗೂಡಿಸಿಕೊಂಡು ಬದುಕಿದಾಗ ಒಬ್ಬ ಮನುಷ್ಯನು ಇಹಪರಗಳಲ್ಲಿ ಯಶಸ್ವಿ ಸಾಧಿಸಲು ಸಾಧ್ಯ. ಪ್ರವಾದಿ ಮುಹಮ್ಮದ್ (ಸ) ಅವರನ್ನು ಅನುಸರಿಸುವವರು ಮಾತ್ರ ನಿಜವಾಗಿ ಪ್ರವಾದಿಯನ್ನು ಪ್ರೀತಿಸುವವರಾಗಿರುತ್ತಾರೆ ಎಂದು ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ  ಹೇಳಿದರು.

ಅವರು ಅಂಜುಮನ್ ಇಸ್ಲಾಮಿಯಾ ಕೋಲಾರ ವತಿಯಿಂದ ಆಯೋಜಿಸಿದ್ದ ಸಾರ್ವಜನಿಕ ಸೀರತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಾಶಯಗಳನ್ನು ಕೋರಿದರು.

ಮೌಲಾನಾ ಕಲೀಮುಲ್ಲಾಹ್ ಬಾಕ್ವಿ ಕಾಸ್ಮಿ ಹಾಗೂ ಮೌಲಾನಾ ಮುಹಮ್ಮದ್ ಅಲಿ‌ ಬರಕಾತಿ, ಇಮಾಮ್ ವ ಖತೀಬ್ ಮಜ್ಜಿದೆ ಹಝ್ರತೆ ಕುತುಬ್ ಗೌರಿ ಈ ಸಂದರ್ಭ ಪ್ರವಾದಿ ಮುಹಮ್ಮದ್ (ಸ) ಅವರ ಜೀವನ ಮತ್ತು ಸಂದೇಶದ ಕುರಿತು ಮಾತನಾಡಿದರು.

ಅಂಜುಮನೆ ಇಸ್ಲಾಮಿಯಾ ಕೋಲಾರ ಅಧ್ಯಕ್ಷ  ಕೆ.ಎಂ ಝಮೀರ್ ಅಹ್ಮದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News