ಸಾಮಾಜಿಕ, ಆರ್ಥಿಕ ಗಣತಿ ವರದಿ ಬಿಡುಗಡೆ ಮಾಡಲಿ: ಬಸವರಾಜ್ ರಾಯರೆಡ್ಡಿ ಒತ್ತಾಯ

Update: 2024-10-04 09:22 GMT

ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೆ ನಮ್ಮದೇ ಸರಕಾರದಲ್ಲಿ ಸಮೀಕ್ಷೆ ಮಾಡಿಸಿದ ಸಾಮಾಜಿಕ, ಆರ್ಥಿಕ ಗಣತಿ ವರದಿಯನ್ನು ಇದೇ ವಾರದಲ್ಲಿ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ನವೆಂಬರ್ 01ರಂದು ಅನುಷ್ಠಾನ ಮಾಡಲಿ ಎಂದು ಸಿಎಂ ಆರ್ಥಿಕ ಸಲಹೆಗಾರ ಮತ್ತು ಶಾಸಕ ಬಸವರಾಜ್ ರಾಯರೆಡ್ಡಿ ಆಗ್ರಹಿಸಿದ್ದಾರೆ.

ಕೊಪ್ಪಳ ತಾಲೂಕಿನ ಗಿಣಗೇರಾ ವಿಮಾನ ನಿಲ್ದಾಣದ ಬಳಿ ಮಾತನಾಡಿದ ಅವರು, ರಾಜ್ಯದಲ್ಲಿ ಅನವಶ್ಯಕ ವಿಚಾರಗಳು ಚರ್ಚೆ ಆಗುತ್ತಿವೆ, ಅವೆಲ್ಲ ಬಂದ್ ಆಗಬೇಕು. ಕರ್ನಾಟಕವು ಸಂಸ್ಕಾರ ಸಾಮಾಜಿಕ ನ್ಯಾಯ ಇರುವಂತ ಪ್ರದೇಶ, ಬಸವೇಶ್ವರ ನಡೆದಾಡುವ ನೆಲವಿದು ಎಂದರು.

ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅಭಿವೃದ್ಧಿ ಚರ್ಚೆ ಮಾಡಿರುವೆ, 2013-18ರಲ್ಲಿ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಎಲ್ಲ ಧರ್ಮ, ಜಾತಿಗಳು ಒಳಗೊಂಡ ಸಮಾಜಿಕ, ಶೈಕ್ಷಣಿಕ, ಆರ್ಥಿಕ ಹಿಂದುಳಿದ ಸಮೀಕ್ಷೆ ಮಾಡಿಸಿತ್ತು. ಆ ಸಮೀಕ್ಷೆಗೆ 165 ಕೋಟಿ ರೂ. ಕೊಟ್ಟು ಸರ್ವೇ ಮಾಡಿಸಿದೆ. ಕಾಂತರಾಜ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡಿದ್ದಾರೆ. ಆಗ ಸಿಎಂಗೆ ಕೊನೆಯ ಅವಧಿಯಲ್ಲಿ ವರದಿ ತಲುಪಿರಲಿಲ್ಲ. ನಂತರ ಕುಮಾರಸ್ವಾಮಿ ಸಿಎಂ ಆದಾಗಲೂ ಬಿಡುಗಡೆ ಮಾಡಲಿಲ್ಲ. ಬೊಮ್ಮಾಯಿ ಸರ್ಕಾರ ವರದಿ ಬಿಡುಗಡೆ ಮಾಡಲಿಲ್ಲ ಎಂದು ಹೇಳಿದರು.

ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ನೇಮಕವಾಗಿದ್ದ ಜಯಪ್ರಕಾಶ್ ಹೆಗ್ಡೆ ಅವಧಿ ಹೆಚ್ಚು ಮಾಡಿದೆವು, ಅವರು ಸಾಮಾಜಿಕ ಗಣತಿ ವರದಿಯನ್ನು 2024ರ ಫೆ.29 ಕ್ಕೆ ಸರ್ಕಾರಕ್ಕೆ ತಲುಪಿಸಿದ್ದಾರೆ. ವರದಿ ಕೊಟ್ಟು ಎಂಟು ತಿಂಗಳ ಆಗಿವೆ. ಮುಖ್ಯಮಂತ್ರಿ ವರದಿ ಬಗ್ಗೆ ಯೋಚನೆ ಮಾಡುವೆ ಎಂದಿದ್ದಾರೆ. ಸಿದ್ದರಾಮಯ್ಯರನ್ನು ವರದಿ ಬಿಡುಗಡೆ ಮಾಡಲು ಒತ್ತಾಯ ಮಾಡಿರುವೆ ಬಡವರ ಬಗ್ಗೆ ಅವರಿಗೆ ಕಾಳಜಿ ಇದೆ, ಮುಂದಿನ ವಾರವೇ ಸಂಪುಟದಲ್ಲಿ ಒಪ್ಪಿಗೆ ಕೊಟ್ಟು ಜಾರಿ ಮಾಡಲು ಒತ್ತಾಯ ಮಾಡಿರುವೆ ಎಂದರು.

ವರದಿ ಒಪ್ಪಿ ಅನುಷ್ಠಾನಗೊಳಿಸಲು ಮನವಿ ಮಾಡಿ, ಆ ಸಮೀಕ್ಷಾ ವರದಿ ನವೆಂಬರ್ 01ರಿಂದ ಜಾರಿ ಮಾಡಬೇಕು ಎಂದು ನಾನು ಸಿಎಂ ಆರ್ಥಿಕ ಸಲಹೆಗಾರ ನಾಗಿ ಒತ್ತಾಯ ಮಾಡಿದೇನೆ.

ಸಿಂಧನೂರಿನ ಕಾರ್ಯಕ್ರಮದಲ್ಲೇ ಸಿಎಂ ವರದಿ ಜಾರಿ ಮಾಡುವುದಾಗಿ ಘೋಷಣೆ ಮಾಡಲು ಒತ್ತಾಯಿಸುತ್ತೇನೆ ಎಂದು ಹೇಳಿದರು.

ರಾಜ್ಯದಲ್ಲಿ ಯಾವ ಜಾತಿ ಏಷ್ಟಿದ್ದಾರೆ ಎನ್ನುವುದು ಗೊತ್ತಿಲ್ಲ. ಈಗ ಶೇ.50 ಮೀಸಲಾತಿ ಇದೆ, ಇದನ್ನು ಶೇ.75ರ ವರೆಗೂ ಮೀಸಲಾತಿ ಕೊಡಲು ಸಾಧ್ಯವಿದೆ. ಸೌಲಭ್ಯ ವಂಚಿತ ಬೇರೆ ಹಿಂದುಳಿದ ವರ್ಗಕ್ಕೆ ಆ ಮೀಸಲಾತಿ ಕೊಡಲು ಅವಕಾಶ ಇದೆ, ಒಳ ಮೀಸಲಾತಿ, ಉಪ ಪಂಗಡಕ್ಕೆ ಕೊಡಲು ಅವಕಾಶ ಇದೆ ಮತ್ತು ವರದಿಯಲ್ಲಿ ತಪ್ಪು ಮಾಡಿದ್ದರೆ ಸರಿಪಡಿಸಲು ಅವಕಾಶ ಇದೆ. ಆದ್ದರಿಂದ ಜನತೆಗೆ ಅನುಕೂಲ ಆಗಲು ವರದಿ ಜಾರಿ ಮಾಡಲಿ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News