ಮಂಡ್ಯ: ಕೃಷಿ ಇಲಾಖೆಯಿಂದ 'ಸಿರಿಧಾನ್ಯ ನಡಿಗೆ'
Update: 2024-12-21 04:36 GMT
ಮಂಡ್ಯ: ಕೃಷಿ ಇಲಾಖೆ ವತಿಯಿಂದ ಮಂಡ್ಯ ನಗರದಲ್ಲಿಂದು 'ಸಿರಿಧಾನ್ಯ ನಡಿಗೆ' ಕಾರ್ಯಕ್ರಮ ಆಯೋಜಿಸಲಾಗಿತ್ತು.
'ಸಿರಿಧಾನ್ಯ ನಡಿಗೆ'ಗೆ ಚಾಲನೆ ನೀಡಿದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಸಿರಿ ಧಾನ್ಯ ಅತ್ಯಂತ ಆರೋಗ್ಯಯುತ ಆಹಾರವಾಗಿದ್ದು, ರಾಜ್ಯ ಸರಕಾರ ಸಿರಧಾನ್ಯ ಬೆಳೆಗೆ ವಿಶೇಷ ಪ್ರೋತ್ಸಾಹ ಧನ ನೀಡುತ್ತಿದೆ ಎಂದರು.
ಬೆಂಗಳೂರಿನಲ್ಲಿ ಮುಂದಿನ ತಿಂಗಳು ಸಿರಿಧಾನ್ಯ ಸಾವಯವ ಅಂತಾರಾಷ್ಟ್ರೀಯ ಮೇಳ ಆಯೋಜಿಸಿದ್ದು ಎಲ್ಲರೂ ಪಾಲ್ಗೊಳುವಂತೆ ಸಚಿವರು ಕರೆ ನೀಡಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಜಂಟಿ ಕೃಷಿ ನಿರ್ದೇಶಕರಾದ ಅಶೋಕ್, ಯುವ ಮುಖಂಡರು ಹಾಗೂ ಕಲಾವಿದ ಸಚ್ಚಿನ್ ಚಲುವರಾಯಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈ ಸಿರಿಧಾನ್ಯ ನಡಿಗೆ ವಿಶೇಷ ಮೆರುಗು ತಂದಿತು.