ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ಭರವಸೆ : ಬಾಡೂಟ ಬಳಗ

Update: 2024-12-19 17:43 GMT

ಮಂಡ್ಯ : ನಗರದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜತೆಗೆ ಮಾಂಸಾಹಾರವನ್ನೂ ನೀಡುವ ಭರವಸೆ ಸಿಕ್ಕಿದ್ದು, ತಮ್ಮ ಹೋರಾಟಕ್ಕೆ ಆರಂಭದ ಗೆಲುವು ಸಿಕ್ಕಿದೆ ಎಂದು ಪ್ರಗತಿಪರ ಸಂಘಟನೆಗಳ ಬಾಡೂಟ ಬಳಗದ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ವಿಡೀಯೋ ಹೇಳಿಕೆ ನೀಡಿರುವ ಬಳಗದ ಮುಖಂಡರು, ಈ ಸಮ್ಮೇಳನದಿಂದಲೇ ಆಹಾರ ಅಸಮಾನತೆ ಮತ್ತು ಆಹಾರ ಅಸ್ಪøಶ್ಯತೆಯನ್ನು ಕೊನೆಗಾಣಿಸುವ ಹೆಜ್ಜೆ ಇಡುವುದಾಗಿ ಸ್ವಾಗತ ಸಮಿತಿ ಅಧ್ಯಕ್ಷರಾದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಅಹಾರ ಸಮಿತಿ ಅಧ್ಯಕ್ಷ, ಶಾಸಕ ರಮೇಶ್ ಬಂಡಿಸಿದ್ದೇಗೌಡ, ಶಾಸಕರಾದ ನರೇಂದ್ರಸ್ವಾಮಿ, ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಡಾ.ಕುಮಾರ್, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಆಹಾರ ತಾತಮ್ಯತೆ ವಿರುದ್ಧ ತಾವು ಹಲವು ದಿನಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ತಾತ್ವಿಕ ಜಯ ಸಿಕ್ಕಿದೆ. ತಮ್ಮ ಭರವಸೆಯನ್ನು ಈಡೇರಿಸುವುದಾಗಿ ಸ್ಪಷ್ಟ ಭರವಸೆ ಬಂದಿದೆ. ಹಾಗಾಗಿ ತಾವೆಲ್ಲರೂ ಸಾಹಿತ್ಯ ಸಮ್ಮೇಳನ ಯಶಸ್ವಿಗಾಗಿ ಭಾಗಿಯಾಗುತ್ತೇವೆ. ಈ ಹೋರಾಟದಲ್ಲಿ ಕೈ ಜೋಡಿಸಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರಾದ ಟಿ.ಎಲ್.ಕೃಷ್ಣೇಗೌಡ, ಎಂ.ಬಿ.ನಾಗಣ್ಣಗೌಡ, ಸಂತೋಷ್ ಜಿ., ಸಿ.ಕುಮಾರಿ, ಪೂರ್ಣಿಮಾ, ಅಭಿಗೌಡ ಹನಕೆರೆ, ಎಚ್.ಎನ್.ನರಸಿಂಹಮೂರ್ತಿ, ಮುಕುಂದ, ಲಕ್ಷ್ಮಣ್ ಚೀರನಹಳ್ಳಿ, ಟಿ.ಡಿ.ನಾಗರಾಜು, ಎಂ.ವಿ.ಕೃಷ್ಣ, ಇತರರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News