ಬಿಜೆಪಿ, ಜೆಡಿಎಸ್‌ ಹೊಂದಾಣಿಕೆ "ಅನ್ನ ಹಳಸಿತ್ತು-ನಾಯಿ ಹಸಿದಿತ್ತು" ಎನ್ನುವಂತಾಗಿದೆ : ಸಿಎಂ ಸಿದ್ದರಾಮಯ್ಯ ವ್ಯಂಗ್ಯ

Update: 2024-04-13 15:31 GMT

ಪಿರಿಯಾಪಟ್ಟಣ : ಬಿಜೆಪಿ, ಜೆಡಿಎಸ್‌ ಹೊಂದಾಣಿಕೆ "ಅನ್ನ ಹಳಸಿತ್ತು-ನಾಯಿ ಹಸಿದಿತ್ತು" ಎನ್ನುವಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪಿರಿಯಾಪಟ್ಟಣದಲ್ಲಿ ನಡೆದ ಜನಧ್ವನಿ-2 ಸಮಾವೇಶದಲ್ಲಿ ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು.

"ಜಾತ್ಯಾತೀತ ಹೆಸರಿಟ್ಟುಕೊಂಡು ಬಿಜೆಪಿ ಜತೆ ಸೇರಿರುವ ಜೆಡಿಎಸ್‌ ಗೆ ಮಾನ ಮರ್ಯಾದೆ ಇದೆಯೇ? ಕೇವಲ ಕುಟುಂಬದ ಹಿತಾಸಕ್ತಿಗಾಗಿ ಯಾರ ಜತೆಗೆ ಬೇಕಾದರೂ ಹೋಗಲು ಜೆಡಿಎಸ್ ರೆಡಿಯಾಗಿದೆ. ಯಾವುದೇ ಸಿದ್ದಾಂತ ಇಲ್ಲ, ಜನಪರವಾದ ಬದ್ಧತೆ ಇಲ್ಲ" ಎಂದು ಟೀಕಿಸಿದರು.

"ಪ್ರಧಾನಿ ಮೋದಿಯವರೇ ಒಂದಲ್ಲಾ ಎರಡಲ್ಲಾ 10 ವರ್ಷ ಪ್ರಧಾನಿ ಆಗಿದ್ದರೂ ಒಂದೇ ಒಂದು ಭರವಸೆಯನ್ನೂ ಈಡೇರಿಸಲಿಲ್ಲ ಯಾಕೆ ?. ನಿಮ್ಮನ್ನು ನಂಬಿದವರಿಗೆ ದ್ರೋಹ ಬಗೆದಿದ್ದು ಸರಿಯೇ?" ಎಂದು ತಮ್ಮದೇ ಶೈಲಿಯಲ್ಲಿ ಪ್ರಶ್ನಿಸಿದರು.

"ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ. ಈ ದೇಶದ ರೈತರು, ಕಾರ್ಮಿಕರು, ಮಹಿಳೆಯರು, ಶ್ರಮಿಕರು, ಸಣ್ಣ ಮಧ್ಯಮ ಉದ್ಯಮಿಗಳಿಗೆ, ಯುವ ಜನರ ಭವಿಷ್ಯಕ್ಕೆ ಒಂದೇ ಒಂದು ಕಾರ್ಯಕ್ರಮವನ್ನೂ ಸಮರ್ಪಕವಾಗಿ ಜಾರಿ ಮಾಡಲಿಲ್ಲ, ಈ ಚಂದಕ್ಕೆ 10 ವರ್ಷ ಪ್ರಧಾನಿಯಾಗಬೇಕಿತ್ತೇ ಮೋದಿಯವರೇ? ಎಂದು ಪ್ರಶ್ನಿಸಿದರು.

ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಶಿವಕುಮಾರ್, ಸಚಿವರಾದ ಕೆ.ವೆಂಕಟೇಶ್, ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ತನ್ವೀರ್ ಸೇಠ್, ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News