ನನ್ನ ಧ್ವನಿ ಅಡಗಿಸಲು ಸರ್ಕಾರ ಎಫ್‌ಐಆರ್ ದಾಖಲಿಸಿದೆ: ಮಾಜಿ ಸಂಸದ ಪ್ರತಾಪ್ ಸಿಂಹ

Update: 2025-02-24 22:32 IST
ನನ್ನ ಧ್ವನಿ ಅಡಗಿಸಲು ಸರ್ಕಾರ ಎಫ್‌ಐಆರ್ ದಾಖಲಿಸಿದೆ: ಮಾಜಿ ಸಂಸದ ಪ್ರತಾಪ್ ಸಿಂಹ

ಮಾಜಿ ಸಂಸದ ಪ್ರತಾಪ್‌ ಸಿಂಹ

  • whatsapp icon

ಮೈಸೂರು: ಉದಯಗಿರಿ ಪೊಲೀಸ್‌ ಠಾಣೆಯ ಪ್ರಕರಣದಲ್ಲಿ ಗಲಾಟೆಗೆ ಕಾರಣನಾದವನ್ನು ಯಾಕೆ ಬಂಧಿಸಿಲ್ಲ ಎಂದು ಕೇಳಿದ್ದೇನೆ. ಇದು ಪ್ರಚೋದಕಾರಿ ವಿಚಾರವೇ?. ನನ್ನ ಧ್ವನಿ ಅಡಗಿಸಲು ಸರ್ಕಾರ ಪ್ರಕರಣ ದಾಖಲಿಸುತ್ತದೆ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ದೂರಿದರು.

ಸರ್ಕಾರಿ ಅತಿಥಿ ಗೃಹದಲ್ಲಿ ಸೋಮವಾರ ತಮ್ಮ ಮೇಲಿನ ಎಫ್‌ಐಆರ್‌ ಗೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗೆ ಪ್ರಕ್ರಿಯಿಸಿದ ಅವರು, ಪುಂಡ ಮುಸ್ಲಿಮರು ಸಾವಿರಾರು ಸಂಖ್ಯೆಯಲ್ಲಿ ಸೇರಿಕೊಂಡು ಪೊಲೀಸರ ಮೇಲೆ ಆಕ್ರಮಣ ಮಾಡಿದರು. ಈ ಘಟನೆ ಬೆನ್ನಲ್ಲೇ ಪೊಲೀಸ್ ಠಾಣೆಗೆ ಭೇಟಿ ನೀಡಿ ಪೊಲೀಸರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದೆವು. ಪೊಲೀಸರ ಬಗ್ಗೆ ಮೆಚ್ವುಗೆ ಮಾತನಾಡಿದೆವು. ದೈರ್ಯದಿಂದ ಇರಿ ಎಂದು ಮಾತನಾಡಿದೆವು. ಇದು ಪ್ರಚೋದನಕಾರಿ ವಿಚಾರವೇ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬಂದ ನಂತರ ನನ್ನ ಮೇಲೆ ಹಲವು ಎಫ್ಐಆರ್ ಮಾಡಿದ್ದಾರೆ. ವಿಧಾನಸಭಾ ಚುನಾವಣೆಯ ವೇಳೆ ವರುಣಾದಲ್ಲಿ ಎರಡು, ಶಿಗ್ಗಾಂವಿ, ದಾವಣಗೆರೆ, ಬೆಂಗಳೂರಿನ ಬಸವೇಶ್ವರ ನಗರ, ಮಾಗಡಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲು ಮಾಡಿದ್ದರು. ಈಗ ಉದಯಗಿರಿ ಪ್ರಕರಣದೊಂದಿಗೆ ಸಾಲು ಸಾಲು ಎಫ್ಐಆರ್ ಹಾಕಿ ಆತ್ಮಸ್ಥೈರ್ಯ ಕುಗ್ಗಿಸಿ ಮನೆಯಿಂದ ಹೊರಬರಬಾರದು ಎಂಬ ಉದ್ದೇಶದಿಂದ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಒಬ್ಬ ಮುಸ್ಲಿಂ ಮೌಲ್ವಿ ಪ್ರಚೋದನೆ ಮಾಡಿದ್ದರೂ ಯಾಕೆ ಬಂಧಿಸಿಲ್ಲ ಎಂದು ಕೇಳಿದ್ದೆ, ಮುಸ್ಲಿಮರು ಪುರುಸೊತ್ತಿಲ್ಲದೆ ಮಕ್ಕಳು ಹುಟ್ಟಿಸುತ್ತಾರೆ ಎಂದಿದ್ದೇನೆ ಇದು ಪ್ರಚೋದನಕಾರಿ ವಿಚಾರವೇ?. ನಾನು ಸತ್ಯ ಹೇಳಿದ್ದೇನೆ. ಶಾರುಖ್ ಖಾನ್‌ಗೆ ಮೂರು‌ ಮಕ್ಕಳಿದ್ದಾರೆ. ಸೈಫ್ ಅಲಿ ಖಾನ್‌ 4 ಮಕ್ಕಳಿದ್ದಾರೆ. ನಿಮ್ಮ ಸೆಲೆಬ್ರಿಟಿಗಳೇ ಕಂಟ್ರೋಲ್ ಇಲ್ಲದೆ ಮಕ್ಕಳು ಹುಟ್ಟಿಸುತ್ತಿದ್ದಾರೆ. ಜನೋತ್ಪಾದನೆಯಲ್ಲಿ ತೊಡಗಿದ್ದೀರಿ ಎಂದು ಹೇಳಿದ್ದೇನೆ ಎಂದು ಪ್ರತಾಪ್ ಸಿಂಹ ಹೇಳಿದರು.

ಮುಸ್ಲಿಮರು ಮಕ್ಕಳನ್ನು ದೇವರು ಕೊಟ್ಟಿದ್ದು ಅಂತ ಹೇಳುತ್ತಾರೆ, ಹಾಗಾದರೆ ನಿಮ್ಮ ಮಕ್ಕಳನ್ನು ದೇವರೆ ನೋಡಿಕೊಳ್ಳಲಿ. ಸರ್ಕಾರ ಯಾಕೆ ನೋಡಿಕೊಳ್ಳಬೇಕು. ಅತಿ ಹೆಚ್ವು ತೆರಿಗೆ ಕಟ್ಟುವವರು ಹಿಂದೂಗಳು. ಆದರೆ ಸೌಲಭ್ಯ ಮುಸ್ಲಿಮರಿಗೆ ಸಿಗುತ್ತಿದೆ. ಸತ್ಯ ಹೇಳಿರೋದು ಪ್ರಚೋದನೆ ಹೇಗಾಗುತ್ತದೆ. ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ನಿರಂತರ ಧ್ವನಿ ಎತ್ತುವೆ. ನನ್ನ ಧ್ವನಿ ಅಡಗಿಸಬೇಕು ಎಂಬ ವ್ಯವಸ್ಥಿತ ಪ್ರಯತ್ನ ಕಳೆದ 10 ವರ್ಷದಿಂದಲೂ ನಡೆದಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News