‘ಅಂಬೇಡ್ಕರ್ ಏನು ಮಹಾ?’ ಎನ್ನುತ್ತಿರುವ ಅಮಿತ್ ಶಾ ಅವರನ್ನು ವಜಾಗೊಳಿಸಿ : ಎಚ್.ಸಿ.ಮಹದೇವಪ್ಪ

Update: 2024-12-23 15:54 GMT

ಬೆಂಗಳೂರು : ‘ದೇಶದ ಸಂವಿಧಾನವನ್ನು ರೂಪಿಸಿಕೊಟ್ಟ ರಾಷ್ಟ್ರ ನಾಯಕ ಅಂಬೇಡ್ಕರ್ ಮೇಲೆ ಗೌರವವಿಲ್ಲದ ಅಮಿತ್ ಶಾ ಅಂತಹವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಂವಿಧಾನದ ರಕ್ಷಕರಾದ ರಾಷ್ಟ್ರಪತಿಯವರು, ಅಮಿತ್ ಶಾರನ್ನು ಸಚಿವ ಮತ್ತು ಸಂಸದನ ಸ್ಥಾನದಿಂದ ವಜಾ ಮಾಡಬೇಕು’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್. ಸಿ.ಮಹದೇವಪ್ಪ ಆಗ್ರಹಿಸಿದ್ದಾರೆ.

ಸೋಮವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಸಂವಿಧಾನಕ್ಕೆ 75 ವರ್ಷಗಳು ಪೂರ್ಣವಾಗಿರುವ ಪ್ರಯುಕ್ತ ಸಂವಿಧಾನದಲ್ಲೇ ಚರ್ಚೆ ನಡೆಯುವ ಸಂದರ್ಭದಲ್ಲಿ ಸಂವಿಧಾನದ ಕರ್ತೃ ಅಂಬೇಡ್ಕರ್ ಅವರನ್ನು ಅವಮಾನಿಸುವಂತಹ ಕೆಲಸ ಮಾಡಿರುವ ಬಿಜೆಪಿಯ ಅಮಿತ್ ಶಾ ಸಂವಿಧಾನಕ್ಕೆ ವಿರೋಧಿ ಧೋರಣೆಯನ್ನು ಅನಾವರಣಗೊಳಿಸಿದ್ದಾರೆ’ ಎಂದು ಟೀಕಿಸಿದ್ದಾರೆ.

‘ಈ ನೂರು ವರ್ಷಗಳಿಂದಲೂ ಜನಸಂಘ ಅಥವಾ ಬಿಜೆಪಿಯು ನಿರಂತರವಾಗಿ ಸಂವಿಧಾನ ಬದಲಾವಣೆಯ ಪ್ರಯತ್ನವನ್ನು ಮಾಡುತ್ತಲೇ ಇದ್ದು ಈ ದಿನ ಸಂಸತ್ತಿನಲ್ಲೇ ಸಂವಿಧಾನ ಶಿಲ್ಪಿ ಅಂಬೇಡ್ಕರ್ ವಿರುದ್ಧ ತಮ್ಮ ಅಸಹನೆಯನ್ನು ಬಹಿರಂಗವಾಗಿಯೇ ಹೊರಹಾಕಿದ್ದು ಇದು ದೇಶದ ಉಳಿವಿನ ದೃಷ್ಟಿಯಲ್ಲಿ ಅಪಾಯಕಾರಿಯಾದಂತಹ ಬೆಳವಣಿಗೆ ಆಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.

ಧರ್ಮ ಸಂಸತ್ ಮೂಲಕ ದೇಶದ ಆಡಳಿತವನ್ನು ನಿಯಂತ್ರಿಸುವ ಉದ್ದೇಶ ಹೊಂದಿದ್ದ ಬಿಜೆಪಿಗರಿಗೆ ಅಂಬೇಡ್ಕರ್ ಸಂವಿಧಾನವು ಚೀನಾದ ಗೋಡೆಗಿಂತಲೂ ದೃಢವಾಗಿ ನಿಂತಿದೆ. ಹೀಗಾಗಿಯೇ ಸಂವಿಧಾನ ಮತ್ತು ಅದನ್ನು ರಚಿಸಿದ ಅಂಬೇಡ್ಕರ್ ಮೇಲೆ ನಿರಂತರ ದಾಳಿಯನ್ನು ಮಾಡುತ್ತಲೇ ಇರುವ ಬಿಜೆಪಿಗರು, ಇದೀಗ ನೇರವಾಗಿ ಅವರನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡುತ್ತಿದ್ದು, ಅವರೇನು ಮಹಾ? ಎಂಬರ್ಥದಲ್ಲಿ ಮಾತನ್ನು ಆಡಲು ಶುರು ಮಾಡಿದ್ದು ಇದನ್ನು ಖಂಡಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News