ಮೈಸೂರು | ಕರ್ಕಶ ಶಬ್ಧ ಮಾಡುವ ಸೈಲೆನ್ಸರ್​ಗಳ ಮೇಲೆ ರೋಡ್‌ ರೋಲರ್‌ ಹತ್ತಿಸಿದ ಪೊಲೀಸರು

Update: 2024-09-04 15:46 GMT

ಮೈಸೂರು : ಮೈಸೂರಿನ ಸಿದ್ದಾರ್ಥನಗರ ಸಂಚಾರಿ ಠಾಣೆ ಪೊಲೀಸರು, ಬುಧವಾರ ಕಾರ್ಯಾಚರಣೆ ನಡೆಸಿ ಕರ್ಕಶ ಶಬ್ದ ಮಾಡುತ್ತಿದ್ದ ಸೌಂಡ್ ಸೈಲೆನ್ಸರ್‌ಗಳ ಮೇಲೆ ರೋಡ್ ರೋಲರ್ ಹತ್ತಿಸಿ ನಾಶಪಡಿಸಿದರು.

ಕಳೆದ 3 ದಿನಗಳಿಂದ ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿದ್ದ ಪೊಲೀಸರು, ಕರ್ಕಶ ಶಬ್ದ ಮಾಡುತ್ತಿದ್ದ 94 ಬೈಕ್ ಗಳನ್ನು ಸೀಝ್ ಮಾಡಿದ್ದರು. ‌

ಇದೀಗ ಇಂದು ಆ ಬೈಕ್‌ಗಳ 217 ಸೈಲೆನ್ಸರ್‌ ಗಳನ್ನು ರೋಡ್ ರೋಲರ್ ಹತ್ತಿಸಿ ನಾಶ ಮಾಡಿದ್ದಾರೆ. ಸೀಝ್ ಮಾಡಿದ ವಾಹನಗಳಿಗೆ ‌ದಂಡ ವಿಧಿಸಿ ಬಳಿಕ ಬಿಡುಗಡೆ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News