ಮೈಸೂರು: ನಿರಂತರ ಮಳೆಗೆ ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ; ರಸ್ತೆ ಉರುಳಿದ ಬಂಡೆ

Update: 2024-12-03 08:23 GMT

ಮೈಸೂರು: ನಿರಂತರವಾಗಿ ಸುರಿದ ಮಳೆಗೆ ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತಗೊಂಡಿದ್ದು, ಮಂಗಳವಾರ ಬೆಳಿಗಿನ ಜಾವ ರಸ್ತೆಗೆ ಬಂಡೆಯೊಂದು ಉರುಳಿ ಬಿದ್ದಿದೆ.

ಮುಂಜಾನೆಯಾದ್ದರಿಂದ  ಯಾರಿಗೂ ತೊಂದರೆಯಾಗಿಲ್ಲ. ಸೋಮವಾರ ಇಡೀ ದಿನ ನಿರಂತರವಾಗಿ ಮಳೆ ಸುರಿದಿದೆ. ಇದರಿಂದ ಸಣ್ಣ ಗುಡ್ಡ ಕುಸಿದು ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಚಾಮುಂಡಿ ಬೆಟ್ಟದ ನಂದಿಗೆ ಹೋಗುವ ರಸ್ತೆಯೂ ಕುಸಿತಗೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News