ಕಾಂಗ್ರೆಸ್ ಗೆ ಐಟಿ ಇಲಾಖೆ ಶಾಕ್ ಬೆನ್ನಲ್ಲೇ ಸಿಪಿಐ ಪಕ್ಷಕ್ಕೂ 11 ಕೋಟಿ ರೂ. ತೆರಿಗೆ ಪಾವತಿಸುವಂತೆ ನೋಟಿಸ್
Update: 2024-03-29 16:45 GMT
ಹೊಸದಿಲ್ಲಿ: ಕಾಂಗ್ರೆಸ್ ಪಕ್ಷಕ್ಕೆ ಆದಾಯ ತೆರಿಗೆ ಇಲಾಖೆ 1,700 ಕೋಟಿ ರೂ. ಪಾವತಿಸಬೇಕೆಂಬ ಹೊಸ ನೋಟಿಸ್ ನೀಡಿದ ಬೆನ್ನಲ್ಲೇ ಸಿಪಿಐ ಪಕ್ಷವೂ ಐಟಿ ಇಲಾಖೆಯಿಂದ ನೋಟಿಸ್ ಸ್ವೀಕರಿಸಿದೆ.
ಇತ್ತೀಚಿನ ವರ್ಷಗಳಲ್ಲಿ ತೆರಿಗೆ ವಿವರಗಳನ್ನು ಸಲ್ಲಿಸಲು ಹಳೆಯ ಪಾನ್ ಕಾರ್ಡ್ ಬಳಸಿರುವುದಕ್ಕಾಗಿ 11 ಕೋಟಿ ರೂಪಾಯಿ ‘‘ಬಾಕಿ’’ ತೆರಿಗೆ ಪಾವತಿಸುವಂತೆ ಸೂಚಿಸಿ ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ)ಕ್ಕೂ ಆದಾಯ ತೆರಿಗೆ ಇಲಾಖೆ ನೋಟಿಸ್ ಕಳುಹಿಸಿದೆ.
ಹಳೆಯ ಪಾನ್ ಕಾರ್ಡ್ ಬಳಸಿರುವುದರಿಂದ ಉಂಟಾಗಿರುವ ಲೋಪದೋಷಗಳಿಗಾಗಿ ದಂಡ ಮತ್ತು ಬಡ್ಡಿ ಪಾವತಿಸುವಂತೆ ನೋಟಿಸ್ ನಲ್ಲಿ ಸೂಚಿಸಲಾಗಿದೆ.
‘‘ಈ ನೋಟಿಸ್ ಬಗ್ಗೆ ನಾವು ಕಾನೂನು ಕ್ರಮ ಕೈಗೊಳ್ಳಲು ಯೋಚಿಸಿದ್ದೇವೆ ಮತ್ತು ನಮ್ಮ ವಕೀಲರನ್ನು ಸಂಪರ್ಕಿಸಿದ್ದೇವೆ’’ ಎಂದು ಹಿರಿಯ ಸಿಪಿಐ ನಾಯಕರೊಬ್ಬರು ಪಿಟಿಐಗೆ ತಿಳಿಸಿದರು.