ನೌಕಾಪಡೆಗಾಗಿ ಅದಾನಿ ಸಂಸ್ಥೆ ನಿರ್ಮಿಸಿದ ಭಾರತದ ಪ್ರಥಮ ದೃಷ್ಠಿ 10 ಸ್ಟಾರ್‌ಲೈನರ್ ಡ್ರೋನ್ ಬಿಡುಗಡೆ
ಹೈದರಾಬಾದ್: ಭಾರತದ ಮೊದಲ ದೇಶೀಯವಾಗಿ ನೌಕಾಪಡೆಗೆನಿರ್ಮಿಸಲಾದ ದೃಷ್ಟಿ 10 ʼಸ್ಟಾರ್‌ಲೈನರ್ʼ ಮಾನವರಹಿತ ಡ್ರೋನ್ ಇಂದು ನೌಕಾಪಡೆ ಮುಖ್ಯಸ್ಥರಾದ ಅಡ್ಮಿರಲ್ ಆರ್ ಹರಿಕುಮಾರ್ ಹಸಿರು ನಿಶಾನೆ ತೋರಿಸಿದರು.
ಈ ಅತ್ಯಾಧುನಿಕ ಡ್ರೋನ್ ಈ ಕ್ಷೇತ್ರದಲ್ಲಿ ಭಾರತಕ್ಕೆ ಮಹತ್ವದ ಸ್ವಾಯತ್ತತೆ ಮತ್ತು ತಂತ್ರಜ್ಞಾನ ನಾಯಕತ್ವಕ್ಕೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಅದಾನಿ ಸಂಸ್ಥೆಯು ಈ ಅತ್ಯಾಧುನಿಕ ಡ್ರೋನ್ ಅನ್ನು ಅದಾನಿ ಡಿಫೆನ್ಸ್ ಎಂಡ್ ಏರೋಸ್ಪೇಸ್ ಸಂಸ್ಥೆ ಮೂಲಕ ತಯಾರಿಸಿದೆ.
ಇಂದಿನ ಸಮಾರಂಭ ಹೈದರಾಬಾದ್‌ನ ಅದಾನಿ ಏರೋಸ್ಪೇಸ್ ಪಾರ್ಕ್‌ನಲ್ಲಿ ನಡೆದಿದೆ. ದೃಷ್ಟಿ 10 ಸ್ಟಾರ್‌ಲೈನರ್ ಆಧುನಿಕ ಇಂಟಲಿಜೆನ್ಸ್, ಸರ್ವೇಲೆನ್ಸ್ ಮತ್ತು ರಿಕಾನ್ನೈಸಾನ್ಸ್ (ಐಎಸ್‌ಆರ್) ಪ್ಲಾಟ್‌ಫಾರ್ಮ್ ಆಗಿದ್ದು 36 ಗಂಟೆ ಕಾಲ ಕಾರ್ಯಾಚರಿಸಬಹುದಾಗಿದೆ. ಅದರ ಪೇಲೋಡ್ ಸಾಮರ್ಥ್ಯ 450 ಕೆಜಿ ಆಗಿದ್ದು , ಇದು STANAG 4671 ಪ್ರಮಾಣೀಕರಣ ಹೊಂದಿರುವ ಏಕೈಕ ಸರ್ವಋತು ಮಿಲಿಟಲಿ ಪ್ಲಾಟ್‌ಫಾರ್ಮ್ ಆಗಿದೆ.