ಅಪರೂಪದ ಶ್ರವಣ ದೋಷವನ್ನು ಎದುರಿಸುತ್ತಿದ್ದೇನೆ ಎಂದ ಗಾಯಕಿ ಅಲ್ಕಾ ಯಾಗ್ನಿಕ್‌

Update: 2024-06-18 10:04 GMT

Photo: IG/therealalkayagnik

ಮುಂಬೈ: ತಮ್ಮ ಸುಮಧುರ ಕಂಠದಿಂದ ಸಂಗೀತ ಪ್ರಿಯರ ಮನ ಗೆದ್ದಿರುವ ಹಾಗೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಖ್ಯಾತ ಗಾಯಕಿ ಅಲ್ಕಾ ಯಾಗ್ನಿಕ್‌ ತಾವು ಅತ್ಯಂತ ಅಪರೂಪವೆಂದು ತಿಳಿಯಲಾದ ʼಸೆನ್ಸೋರಿನ್ಯೂರಲ್‌ ನರ್ವ್‌ ಹಿಯರಿಂಗ್‌ ಲಾಸ್ʼ ಎಂಬ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿರುವ ಗಾಯಕಿ ತಾವು ಕಳೆದ ಕೆಲ ವಾರಗಳಿಂದ ತೆರೆಮರೆಯಲ್ಲಿರುವುದಕ್ಕೆ ಕಾರಣವನ್ನು ನೀಡಿದ್ದಾರೆ.

“ಕೆಲ ವಾರಗಳ ಹಿಂದೆ, ವಿಮಾನದಿಂದ ಹೊರಬಂದ ನನಗೆ ದಿಢೀರ್‌ ಎಂದು ಏನೂ ಕೇಳಿಸದಂತಾಗಿತ್ತು. ಇದರ ನಂತರದ ವಾರಗಳಲ್ಲಿ ಸಾಕಷ್ಟು ಧೈರ್ಯವನ್ನು ತಂದುಕೊಳ್ಳಲು ಯತ್ನಿಸಿದೆ. ಈಗ ನನ್ನ ಮೌನ ಮುರಿದು ನನ್ನ ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಮಾಹಿತಿ ನೀಡುತ್ತಿದ್ದೇನೆ,” ಎಂದು ಅವರು ಬರೆದಿದ್ದಾರೆ.

ವೈರಲ್‌ ಅಟ್ಯಾಕ್‌ ಕಾರಣ ಹೀಗಾಗಿದೆ ಎಂದೂ ಅವರು ಹೇಳಿಕೊಂಡಿದ್ದಾರೆ ಹಾಗೂ ತಮಗಾಗಿ ಪ್ರಾರ್ಥಿಸುವಂತೆ ಅಭಿಮಾನ ಬಳಗವನ್ನು ಕೇಳಿಕೊಂಡಿದ್ದಾರೆ.

ಆಕೆಯ ಪೋಸ್ಟ್‌ ವೈರಲ್‌ ಆಗಿದೆ.

ಇಂತಹ ಆರೋಗ್ಯ ಸಮಸ್ಯೆಯು ಕಿವಿಯ ಒಳಭಾಗದ ನರಗಳಿಗೆ ಉಂಟಾದ ಹಾನಿಯಿಂದ ಉಂಟಾಗುತ್ತದೆ. ಶೇ90ರಷ್ಟು ವಯಸ್ಕರು ಈ ಸಮಸ್ಯೆಯಿಂದ ಶ್ರವಣ ದೋಶಕ್ಕೊಳಗಾಗುತ್ತಾರೆ. ದೊಡ್ಡ ಶಬ್ದ, ಅನುವಂಶಿಕ ಕಾರಣಗಳು ಹಾಗೂ ವಯಸ್ಸಿನ ಕಾರಣದಿಂದ ಹೀಗಾಗುತ್ತದೆ.

Full View

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News