ಕಳೆದ 6 ವರ್ಷಗಳಲ್ಲಿ ನೇಮಕಗೊಂಡ ಹೈಕೋರ್ಟ್‌ ನ್ಯಾಯಾಧೀಶರ ಪೈಕಿ ಕೇವಲ ಶೇ. 3ರಷ್ಟು ಮಂದಿ ಪರಿಶಿಷ್ಟ ಜಾತಿಗೆ ಸೇರಿದವರು, ಶೇ 1.5 ರಷ್ಟು ಮಂದಿ ಪರಿಶಿಷ್ಟ ವರ್ಗದವರು

Update: 2023-08-09 14:11 GMT

ಸಾಂದರ್ಭಿಕ ಚಿತ್ರ. 

ಹೊಸದಿಲ್ಲಿ: ಕಳೆದ ಆರು ವರ್ಷಗಳಲ್ಲಿ ಹೈಕೋರ್ಟ್‌ಗಳಿಗೆ ನೇಮಕಗೊಂಡ ನ್ಯಾಯಾಧೀಶರುಗಳ ಪೈಕಿ ಕೇವಲ ಶೇ3 ರಷ್ಟು ಮಂದಿ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದರೆ ಕೇವಲ ಶೇ. 1.5ರಷ್ಟು ಮಂದಿ ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿದ್ದಾರೆ ಎಂದು ಸಂಸದೀಯ ಸಮಿತಿಯ ವರದಿಯೊಂದು ತಿಳಿಸಿದೆ.

“ನ್ಯಾಯಾಂಗ ಪ್ರಕ್ರಿಯೆಗಳು ಮತ್ತು ಅವುಗಳ ಸುಧಾರಣೆ” ಎಂಬ ಶೀರ್ಷಿಕೆಯ ವರದಿಯನ್ನು ಸೋಮವಾರ ರಾಜ್ಯಸಭೆಯಲ್ಲಿ ಮಂಡಿಸಲಾಯಿತು. ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಕಾನೂನು ಮತ್ತು ನ್ಯಾಯ ಸಂಸದೀಯ ಸ್ಥಾಯಿ ಸಮಿತಿಯ 133ನೇ ವರದಿ ಇದಾಗಿದೆ.

ಈ ಸಮಿತಿಯ ನೇತೃತ್ವವನ್ನು ಬಿಜೆಪಿ ಸಂಸದ ಸುಶೀಲ್‌ ಮೋದಿ ವಹಿಸಿದ್ದಾರೆ.

2018ರಿಂದ ನೇಮಕಗೊಂಡ 601 ಹೈಕೋರ್ಟ್‌ ನ್ಯಾಯಾಧೀಶರುಗಳ ಪೈಕಿ 457 ಮಂದಿ ಸಾಮಾನ್ಯ ವರ್ಗಗಳಿಗೆ ಸೇರಿದ್ದರೆ, 18 ಮಂದಿ ಪರಿಶಿಷ್ಟ ಜಾತಿ ಮತ್ತು ಒಂಬತ್ತು ಮಂದಿ ಪರಿಶಿಷ್ಟ ಸಮುದಾಯದವರಾಗಿದ್ದಾರ.

ಒಟ್ಟು 72 ನ್ಯಾಯಾಧೀಶರು ಇತರ ಹಿಂದುಳಿದ ವರ್ಗದವರು, 91 ಮಂದಿ ಮಹಿಳೆಯರಾಗಿದ್ದರೆ ಕೇವಲ 3 ಮಂದಿ ಅಲ್ಪಸಂಖ್ಯಾತ ಸಮುದಾಯದವರಾಗಿದ್ದಾರೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News