ಆಂಧ್ರ: ಅತ್ಯಾಚಾರಕ್ಕೆ ಒಳಗಾಗಿದ್ದ ದಲಿತ ಬಾಲಕಿ ಆತ್ಮಹತ್ಯೆ

Update: 2023-07-24 07:54 GMT

ವಿಜಯವಾಡ: 13 ವರ್ಷದ ದಲಿತ ಬಾಲಕಿಯೊಬ್ಬಳು ಹದಿಹರೆಯದವರಿಬ್ಬರಿಂದ ಅತ್ಯಾಚಾರಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿಯ ಶವ ರವಿವಾರ ಆಂಧ್ರಪ್ರದೇಶದ ಪಾಮರ್ರು ಮಂಡಲದ ಕಾಲುವೆಯಲ್ಲಿ ಪತ್ತೆಯಾಗಿದೆ.

ಇಬ್ಬರು ಹದಿಹರೆಯದವರು ತನ್ನ ಮೇಲೆ ಅತ್ಯಾಚಾರ ಎಸಗಿದ್ದರಿಂದ ಅವಮಾನಿತಗೊಂಡಿದ್ದ ಬಾಲಕಿ ತನ್ನ ಜೀವನವನ್ನು ಅಂತ್ಯಗೊಳಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿ ಪಾಮರ್ರು ಮಂಡಲದ ನಿಮ್ಮಕೂರು ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಳು. ಗುರುವಾರ (ಜುಲೈ 20) ಬೆಳಿಗ್ಗೆ ತನ್ನ ಹುಟ್ಟೂರಾದ ಕೃಷ್ಣಾ ಜಿಲ್ಲೆಯ ನಿಭಾನುಪುಡಿ ಗ್ರಾಮದಿಂದ ಶಾಲೆಗೆ ಹೋಗಿದ್ದಳು, ಆದರೆ ಅವಳು ಹಿಂತಿರುಗಲಿಲ್ಲ.

ಇದರಿಂದ ಆತಂಕಗೊಂಡ ಬಾಲಕಿಯ ಪೋಷಕರು ಅದೇ ದಿನ ಸಮೀಪದ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.

13 ವರ್ಷದ ಬಾಲಕಿ ಕಾಣೆಯಾಗಿರುವ ಬಗ್ಗೆ ಸಂತ್ರಸ್ತೆಯ ತಾಯಿ ವಾಣಿ ದೂರು ದಾಖಲಿಸಿದ್ದಾರೆ ಎಂದು ಗುಡಿವಾಡ ಡಿಎಸ್ಪಿ ಶ್ರೀಕಾಂತ್ ತಿಳಿಸಿದ್ದಾರೆ.

ಪೊಲೀಸರು ಎಂಟು ತಂಡಗಳನ್ನು ರಚಿಸಿ ಪ್ರಕರಣದ ತನಿಖೆ ಆರಂಭಿಸಿದ್ದಾರೆ ತನಿಖೆಯ ಸಮಯದಲ್ಲಿ, ಪೊಲೀಸರು ಹದಿಹರೆಯದ ಹುಡುಗನನ್ನು ಶಂಕೆಯ ಮೇಲೆ ಬಂಧಿಸಿದರು. ಶಂಕಿತನನ್ನು ಲೋಕೇಶ್ ಎಂದು ಗುರುತಿಸಲಾಗಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಗುಡಿವಾಡ ಡಿಎಸ್ಪಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News