"ತರಕಾರಿ ದರ ಏರಿಕೆಗೆ ‘ಮಿಯಾ’ಗಳು ಕಾರಣವೆಂದ ಅಸ್ಸಾಂ ಸಿಎಂ: ಕೋಮು ರಾಜಕಾರಣ ಎಂದ ವಿಪಕ್ಷಗಳು

ಗುವಾಹಟಿಯಲ್ಲಿ ತರಕಾರಿ ಬೆಲೆಗಳಲ್ಲಿ ಭಾರೀ ಏರಿಕೆಯಾಗಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಶರ್ಮಾ ಅವರು,‘‘ ಹಳ್ಳಿಗಳಲ್ಲಿ ತರಕಾರಿಗಳು ಅಷ್ಟೊಂದು ದುಬಾರಿಯಾಗಿಲ್ಲ. ಇಲ್ಲಿ ಮಾತ್ರ ಮಿಯಾ ವ್ಯಾಪಾರಿಗಳು ನಮಗೆ ಅಧಿಕ ದರ ವಿಧಿಸುತ್ತಿದ್ದಾರೆ. ಒಂದು ವೇಳೆ ಅಸ್ಸಾಮಿ ವ್ಯಾಪಾರಿಗಳು ತರಕಾರಿಗಳನ್ನು ಮಾರಾಟ ಮಾಡುತ್ತಿದ್ದರೆ, ಅವರು ತಮ್ಮದೇ ಜನರನ್ನು ಸುಲಿಗೆ ಮಾಡುತ್ತಿರಲಿಲ್ಲ ಎಂದು ಹೇಳಿದ್ದು.

Update: 2023-07-16 17:30 GMT

 ಹಿಮಂತ ಬಿಸ್ವ ಶರ್ಮಾ | Photo: PTI

ಗುವಾಹಟಿ: ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ಟೊಮೆಟೊ ಸೇರಿದಂತೆ ತರಕಾರಿ ದರಗಳು ಗಗನಕ್ಕೇರಿರುವುದಕ್ಕೆ ‘ಮಿಯಾ ’(ಬಂಗಾಳಿ ಮುಸ್ಲಿಂ) ವ್ಯಾಪಾರಿಗಳೇ ಕಾರಣವೆಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ದೂಷಿಸಿರುವುದನ್ನು ಪ್ರತಿಪಕ್ಷಗಳು ತೀವ್ರವಾಗಿ ಖಂಡಿಸಿವೆ.

ಗುವಾಹಟಿಯಲ್ಲಿ ತರಕಾರಿ ಬೆಲೆಗಳಲ್ಲಿ ಭಾರೀ ಏರಿಕೆಯಾಗಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಶರ್ಮಾ ಅವರು,‘‘ ಹಳ್ಳಿಗಳಲ್ಲಿ ತರಕಾರಿಗಳು ಅಷ್ಟೊಂದು ದುಬಾರಿಯಾಗಿಲ್ಲ. ಇಲ್ಲಿ ಮಾತ್ರ ಮಿಯಾ ವ್ಯಾಪಾರಿಗಳು ನಮಗೆ ಅಧಿಕ ದರ ವಿಧಿಸುತ್ತಿದ್ದಾರೆ. ಒಂದು ವೇಳೆ ಅಸ್ಸಾಮಿ ವ್ಯಾಪಾರಿಗಳು ತರಕಾರಿಗಳನ್ನು ಮಾರಾಟ ಮಾಡುತ್ತಿದ್ದರೆ, ಅವರು ತಮ್ಮದೇ ಜನರನ್ನು ಸುಲಿಗೆ ಮಾಡುತ್ತಿರಲಿಲ್ಲ ಎಂದು ಹೇಳಿದ್ದು.

ಗುವಾಹಟಿಯ ಎಲ್ಲಾ ಫುಟ್ಪಾತ್ ಗಳನ್ನು ನಾನು ತೆರವುಗೊಳಿಸುತ್ತೇನೆ ಹಾಗೂ ನಮ್ಮ ಅಸ್ಸಾಮಿ ಜನರು ಮುಂದೆ ಬಂದು, ತಮ್ಮದೇ ವ್ಯಾಪಾರವನ್ನು ಆಗ್ರಹಿಸುತ್ತಿದ್ದೇನೆ ಎಂದವು ಹೇಳಿದ್ದರು.

ಬಂಗಾಳಿ ಬಾಷಿಕ ಮುಸ್ಲಿಮರನ್ನು ಸಾಮಾನ್ಯವಾಗಿ ಅಸ್ಸಾಂನಲ್ಲಿ ಮಿಯಾಗಳೆಂದು ಕರೆಯಲಾಗುತ್ತದೆ. ಈ ಸಮುದಾಯದವರು ಬಹುತೇಕವಾಗಿ ತರಕಾರಿ ಮಾರಾಟ ಹಾಗೂ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.

ಮುಖ್ಯಮಂತ್ರಿಯ ಆಕ್ಷೇಪಕಾರಿ ಹೇಳಿಕೆಯು ಮಿಯಾಗಳಿಗೆ ನೋವುಂಟು ಮಾಡಿದೆ ಎಂದು ಎಐಯುಡಿಎಫ್ ವರಿಷ್ಠ ಬದ್ರುದ್ದೀನ್ ಅಜ್ಮಲ್ ತಿಳಿಸಿದ್ದಾರೆ. ಬಂಗಾಳಿ ಮುಸ್ಲಿಂ ವ್ಯಾಪಾರಿಗಳ ಬಗ್ಗೆ ಶರ್ಮಾ ನೀಡಿರುವ ಹೇಳಿಕೆಯು,ಮುಖ್ಯಮಂತ್ರಿ ಹುದ್ದೆಗೆ ಭೂಷಣವಲ್ಲವೆಂದು ಅಜ್ಮಲ್ ಹೇಳಿದ್ದಾರೆ. ಈ ಹೇಳಿಕೆಯಿಂದ ಬಂಗಾಳಿ ಮುಸ್ಲಿಂ ಸಮುದಾಯಕ್ಕೆ ನೋವಾಗಿದೆ ಹಾಗೂ ಅಪಮಾನವಾಗಿದೆ ಎಂದವರು ಹೇಳಿದ್ದಾರೆ,.

‘‘ಇಂತಹ ಹೇಳಿಕೆಗಳು ಕೋಮು ವಿಭಜನೆಯನ್ನು ಸೃಷ್ಟಿಸುತ್ತವೆ. ಇದರಿಂದ ಯಾವುದೇ ಅಹಿತಕರ ಘಟನೆಯ ಕಿಡಿ ಎದ್ದಲ್ಲಿ ಅದಕ್ಕೆ ಸರಕಾರ ಹಾಗೂ ಹಿಮಂತ ಬಿಸ್ವ ಶರ್ಮಾ ಅವರು ಹೊಣೆಗಾರರೆಂದು ಲೋಕಸಭಾ ಸಂಸದರೂ ಆದ ಆಜ್ಮಾಲ್ ಹೇಳಿದ್ದಾರೆ. ತರಕಾರಿಗಳ ದರವನ್ನು ಮಿಯಾಗಳು ನಿಯಂತ್ರಿಸುತ್ತಿಲ್ಲವೆಂದು ಅಜ್ಮಲ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News