100 ಮೀಟರ್ ಹರ್ಡಲ್ಸ್ ಓಡಿದ ಬೆಲ್ಜಿಯಂ ಶಾಟ್ ಪುಟ್ ಪಟು!
ಹೊಸದಿಲ್ಲಿ: ತಮ್ಮ ತಂಡವನ್ನು ಅನರ್ಹತೆಯಿಂದ ರಕ್ಷಿಸುವ ಸಲುವಾಗಿ ಬೆಲ್ಜಿಯಂನ ಶಾಟ್ಪುಟ್ ಮತ್ತು ಹ್ಯಾಮರ್ ಥ್ರೋ ಚಾಂಪಿಯನ್ ಜೊಲಿಯನ್ ಬೂಮ್ಕೊವ್ 100 ಮೀಟರ್ ಹರ್ಡಲ್ಸ್ ಓಡಿದ ಸ್ವಾರಸ್ಯಕರ ಪ್ರಸಂಗದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಬ್ಬರು ಬೆಲ್ಜಿಯಂ ಅಥ್ಲೀಟ್ಗಳು ಗಾಯದ ಕಾರಣದಿಂದ ಹರ್ಡಲ್ಸ್ ಒಟ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಗಿ ಬಂದದ್ದರಿಂದ ತಮ್ಮ ವೃತ್ತಿಪರ ಅಥ್ಲೆಟಿಕ್ ಕ್ರೀಡೆಯಿಂದ ಹೊರಬಂದ ಬೊಮ್ಕೊವ್, ಪ್ರತಿ ತಡೆಗಳನ್ನು ದಾಟಲು ಜಾಗಕೂಕತೆಯಿಂದ ಪ್ರಯತ್ನ ಮಾಡಿ, ಯಶಸ್ವಿಯಾದಾಗಲೆಲ್ಲ ನಸುನಗೆ ಹೊರಸೂಸುತ್ತಿರುವ ವಿಡಿಯೊ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಬೆಲ್ಜಿಯಂ ತಂಡದ ಯಾವ ಅಥ್ಲೀಟ್ಗಳೂ 100 ಮೀಟರ್ ಹರ್ಡಲ್ಸ್ ಓಟದಲ್ಲಿ ಪಾಲ್ಗೊಳ್ಳದಿದ್ದರೆ, ತಂಡ ಅನರ್ಹಗೊಳ್ಳುವ ಅಪಾಯವಿತ್ತು.
ಯಾವುದೇ ತಡೆಗಳನ್ನು ಬೀಳಿಸದೇ 32.81 ಸೆಕೆಂಡ್ಗಳಲ್ಲಿ 100 ಮೀಟರ್ ಗುರಿ ತಲುಪಿದರು. ಚಿನ್ನದ ಪದಕ ಗಳಿಸಿದ ಸ್ಪೇನ್ ಸ್ಪ್ರಿಂಟರ್ ತೆರೇಸಾ ಎರೆಂಡೋನಿಯಾ 13.22 ಸೆಕೆಂಡ್ಗಳಲ್ಲಿ ಗುರಿ ತಲುಪಿದರೆ ಬೊಮ್ಕೊವ್ 19 ಸೆಕೆಂಡ್ ಹೆಚ್ಚುವರಿ ಸಮಯ ತೆಗೆದುಕೊಂಡರು.
ಅಥ್ಲೀಟ್ನ ಕ್ರೀಡಾಸ್ಫೂರ್ತಿಯನ್ನು ಪ್ರೇಕ್ಷಕರು ಮನಸಾರೆ ಮೆಚ್ಚಿಕೊಂಡರೆ, ತಂಡಕ್ಕೆ ಎರಡು ಅಂಕ ಗೆದ್ದುಕೊಂಡ ಇವರನ್ನು ಎದುರಾಳಿ ಅಥ್ಲೀಟ್ಗಳು ಕೂಡಾ ಅಭಿನಂದಿಸಿದರು. ಕೊನೆಯ ಮೂರು ಸ್ಥಾನಗಳನ್ನು ಪಡೆಯುವ ತಂಡಗಳು ಒಂದನೇ ಡಿವಿಷನ್ನಿಂದ ನಿರ್ಗಮಿಸುವ ಕಾರಣದಿಂದ ಇವರು ಗಳಿಸಿದ ಎರಡು ಅಂಕಗಳು ಅಮೂಲ್ಯ ಎನಿಸಿದವು.