ಇತ್ತೀಚಿನ ದಿನಗಳಲ್ಲಿ 'ಭಾರತ್ ಮಾತಾ' ಎನ್ನುವುದೇ ಅಸಂಸದೀಯ ಪದವಾಗಿದೆ: ರಾಹುಲ್ ಗಾಂಧಿ

Update: 2023-08-11 05:49 GMT

ಹೊಸದಿಲ್ಲಿ: "ಸ್ಪಷ್ಟವಾಗಿ ಹೇಳಬೇಕೆಂದರೆ ಭಾರತದಲ್ಲಿ ಇಂದಿನ ದಿನಗಳಲ್ಲಿ ಭಾರತ್ ಮಾತಾ ಎನ್ನುವುದೇ ಅಸಂಸದೀಯ ಪದವಾಗಿದೆ" ಎಂದು ಕಾಂಗ್ರೆಸ್ ಮುಖಂಡ ರಾಹುಲ್ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ಲೋಕಸಭೆಯಲ್ಲಿ ಎನ್ಡಿಎ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆಯ ವೇಳೆ ರಾಹುಲ್ಗಾಂಧಿಯವರ ಭಾಷಣವನ್ನು ಸ್ಪೀಕರ್ ಓಂಬಿರ್ಲಾ, ಭಾಗಶಃ ಕಡತದಿಂದ ಕಿತ್ತುಹಾಕಿರುವ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ರಾಹುಲ್ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಇಂಡಿಯಾ ವಿರೋಧ ಪಕ್ಷಗಳ ಕೂಟದ ಪರವಾಗಿ ಕಾಂಗ್ರೆಸ್ ಮಂಡಿಸಿದ ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸುವ ಮುನ್ನ ಸಂಸಸತ್ನಿಂದ ಹೊರನಡೆದ ರಾಹುಲ್, ಪ್ರಧಾನಿ ಭಾಷಣವಾಗುತ್ತಿದ್ದಾಗ ವಾಪಸ್ಸಾದರು.

ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಎರಡನೇ ದಿನ ರಾಹುಲ್ಗಾಂಧಿ ಭಾರತ್ಮಾತಾ ಬಗ್ಗೆ ಮಾಡಿದ ಭಾಷಣದ ಕೆಲ ಅಂಶಗಳನ್ನು ಬುಧವಾರ ರಾತ್ರಿ ಸ್ಪೀಕರ್ ಓಂಬಿರ್ಲಾ ಲೋಕಸಭೆಯ ಕಡತದಿಂದ ಕಿತ್ತುಹಾಕಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News