ಚುನಾವಣಾ ಜಾಹೀರಾತಿಗಾಗಿ ಬಿಜೆಪಿಯಿಂದ ನವೆಂಬರ್ ನಲ್ಲಿ 40 ಕೋಟಿ ರೂ.ಗೂ ಅಧಿಕ ವೆಚ್ಚ

Update: 2023-12-11 18:09 GMT

Photo: PTI 

ಹೊಸದಿಲ್ಲಿ: ಅಗ್ರ 20 ರಾಜಕೀಯ ಜಾಹೀರಾತುದಾರರು ಮೆಟಾ ವೇದಿಕೆಯಲ್ಲಿ ನವೆಂಬರ್ ತಿಂಗಳಲ್ಲಿ 7,901 ಜಾಹೀರಾತುಗಳಿಗಾಗಿ 5.98 ಕೋಟಿ ರೂ. ವೆಚ್ಚ ಮಾಡಿದ್ದಾರೆ.

ಇದೇ ಅವಧಿಯಲ್ಲಿ 36,31 ಕೋಟಿ ರೂ. ಮೌಲ್ಯದ 15,405 ರಾಜಕೀಯ ಜಾಹೀರಾತುಗಳು ಗೂಗಲ್ ಮೂಲಕ ಪ್ರಸಾರವಾಗಿವೆ. ಗೂಗಲ್ ಹಾಗೂ ಮೆಟಾದಲ್ಲಿ ನವೆಂಬರ್ನ ಅಗ್ರ 20 ಜಾಹೀರಾತುದಾರರಿಗೆ ಹೋಲಿಸಿದರೆ, ಕಾಂಗ್ರೆಸ್ ಗಿಂತ ಬಿಜೆಪಿಯೇ ಅತ್ಯಧಿಕ ವೆಚ್ಚ ಮಾಡಿರುವುದನ್ನು ಹಿಂದೂಸ್ತಾನ್ ಟೈಮ್ಸ್ ಬಹಿರಂಗಗೊಳಿಸಿದೆ.

ಮೆಟಾ ವೇದಿಕೆಯಲ್ಲಿ ಜಾಹೀರಾತಿಗಾಗಿ ಬಿಜೆಪಿ ಕಾಂಗ್ರೆಸ್ ಗಿಂತ ಹೆಚ್ಚು ವೆಚ್ಚ ಮಾಡಿದೆ. ಬಿಜೆಪಿ ಶೇ. 43.2 ಅಥವಾ 2.58 ಕೋಟಿ ರೂ. ವೆಚ್ಚ ಮಾಡಿದ್ದರೆ, ಕಾಂಗ್ರೆಸ್ ಶೇ. 37.48 ಅಥವಾ 2.24 ಕೋಟಿ ರೂ. ವೆಚ್ಚ ಮಾಡಿದೆ.

ಇನ್ನೊಂದೆಡೆ ಗೂಗಲ್ ಜಾಹೀರಾತಿಗಾಗಿ ಕಾಂಗ್ರೆಸ್ 14.3 ಕೋಟಿ ರೂ, ಬಿಆರ್ಎಸ್ 12.1 ಕೋಟಿ ರೂ. ಹಾಗೂ ಬಿಜೆಪಿ 4.16 ಕೋಟಿ ರೂ. ವೆಚ್ಚ ಮಾಡಿದೆ.

ಫೇಸ್ ಬುಕ್ ಹಾಗೂ ಇನ್ಸ್ಟಾ ಗ್ರಾಂ ಸೇರಿದಂತೆ ಮೆಟಾದಲ್ಲಿ ನವೆಂಬರ್ ನಲ್ಲಿ ಆನ್ಲೈನ್ ಜಾಹೀರಾತುಗಳಿಗಾಗಿ ಅತ್ಯಧಿಕ ವೆಚ್ಚ ಮಾಡಿದ ರಾಜ್ಯಗಳೆಂದರೆ ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಡ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News