ಬ್ರಿಜ್ ಭೂಷಣ್ ಜೈಲಿನಲ್ಲಿರಬೇಕು, ಸಂಸತ್ತಿನಲ್ಲಿ ಅಲ್ಲ: ಕೇಂದ್ರ, ದಿಲ್ಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಡಿಸಿಡಬ್ಲ್ಯು

Update: 2023-07-12 18:02 GMT

 Swati Maliwal | ಫೋಟೋ: PTI

ಹೊಸದಿಲ್ಲಿ : ನೀವು ನಿಮ್ಮ ನಾಯಕರನ್ನು ಎಷ್ಟು ಕಾಲ ರಕ್ಷಿಸಬಹುದು ? ಅವರ ವಿರುದ್ಧ ಯಾಕೆ ಕ್ರಮ ತೆಗೆದುಕೊಂಡಿಲ್ಲ? ಇದು ನಮ್ಮ ಪುತ್ರಿಯರನ್ನು ರಕ್ಷಿಸುವ ರೀತಿಯೆ? ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಜೈಲಿನಲ್ಲಿರಬೇಕು, ಸಂಸತ್ತಿನಲ್ಲಿ ಅಲ್ಲ ಎಂದು ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಬುಧವಾರ ಹೇಳಿದ್ದಾರೆ.

ಬ್ರಿಜ್ ಭೂಷಣ್ ವಿರುದ್ಧ ''ತಾಂತ್ರಿಕ ಪುರಾವೆ''ಗಳು ಇವೆ ಎಂದು ಪೊಲೀಸರು ಪ್ರತಿಪಾದಿಸಿದ ಹೊರತಾಗಿಯೂ ಅವರ ವಿರುದ್ಧ ಪೊಲೀಸರಾಗಲಿ, ಕೇಂದ್ರ ಸರಕಾರವಾಗಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅವರು ಹೇಳಿದ್ದಾರೆ. ''ದಿಲ್ಲಿ ಪೊಲೀಸರು ಬ್ರಿಜ್ ಭೂಷಣ್ ವಿರುದ್ಧ ನ್ಯಾಯಾಲಯಕ್ಕೆ ದೃಡವಾದ ಪುರಾವೆ ಸಲ್ಲಿಸಿದ್ದಾರೆ.

ಕುಸ್ತಿಪಟುಗಳಿಗೆ ಕಿರುಕುಳ ನೀಡಿರುವುದರ ಬಗ್ಗೆ ತಿಳಿದಿರುವ ಹೊರತಾಗಿಯೂ ನೀವು ಯಾಕೆ ಬ್ರಿಜ್ ಭೂಷಣ್ ಅವರನ್ನು ಬಂಧಿಸಿಲ್ಲ ಎಂದು ನಾನು ಪೊಲೀಸರನ್ನು ಪ್ರಶ್ನಿಸಲು ಬಯಸುತ್ತೇನೆ'' ಎಂದು ಅವರು ಹೇಳಿದರು. ಬ್ರಿಜ್ ಭೂಷಣ್ ಗೂಂಡಾ ಎಂಬುದು ಇಡೀ ಲೋಕಕ್ಕೇ ತಿಳಿದಿದೆ. ಅವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ದೇಶದ ಅತ್ಯುಚ್ಚ ಮಹಿಳಾ ಕುಸ್ತಿಪಟುಗಳು ರಸ್ತೆಯಲ್ಲಿ ಕುಳಿತು ಬ್ರಿಜ್ ಭೂಷಣ್ ಅವರನ್ನು ಬಂಧಿಸುವಂತೆ ಆಗ್ರಹಿಸಿದರು. ಆದರೆ, ದಿಲ್ಲಿ ಪೊಲೀಸರು ಅವರನ್ನು ಬಂಧಿಸಿಲ್ಲ ಎಂದು ಸ್ವಾತಿ ಮಲಿವಾಲ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News