ಹೆಲ್ಮೆಟ್‌ ಧರಿಸದ್ದಕ್ಕೆ ಕಾರು ಚಾಲಕನಿಗೆ ದಂಡ!

Update: 2024-05-16 11:30 GMT

ಸಾಂದರ್ಭಿಕ ಚಿತ್ರ | PC : NDTV 

ಝಾನ್ಸಿ: ಅಸಹಜ ಘಟನೆಯೊಂದರಲ್ಲಿ, ಝಾನ್ಸಿಯ ಟ್ರಕ್ ಸಂಘಟನೆಯ ಅಧ್ಯಕ್ಷರಾದ ಬಹದ್ದೂರ್ ಸಿಂಗ್ ಪರಿಹಾರ್ ಅವರು ಹೆಲ್ಮೆಟ್ ಧರಿಸದೆ ಕಾರು ಚಲಾಯಿಸುತ್ತಿದ್ದರು ಎಂದು ರೂ. 1,000 ದಂಡ ವಿಧಿಸಿರುವ ಪ್ರಕರಣ ವರದಿಯಾಗಿದೆ. ದಂಡದ ಚಲನ್ ನ ಪ್ರತಿಯಲ್ಲಿ ದ್ವಿಚಕ್ರ ವಾಹನ ಎಂದು ನಮೂದಿಸಲಾಗಿದ್ದು, ವಾಹನಗಳ ಪ್ರವರ್ಗದಲ್ಲಿ ಕಾರನ್ನು ಮೋಟರ್ ಕಾರ್ ಎಂದು ಸ್ಪಷ್ಟವಾಗಿ ವರ್ಗೀಕರಿಸಲಾಗಿದೆ.

ಈ ವಿಚಿತ್ರ ಪರಿಸ್ಥಿತಿಯ ಹೊರತಾಗಿಯೂ, ತಮಗೆ ವಿಧಿಸಿದ ದಂಡವನ್ನು ಕೂಡಲೇ ಪ್ರಶ್ನಿಸುವ ಬದಲು, ಚಲಾಯಿಸುವಾಗ ಹೆಲ್ಮೆಟ್ ಧರಿಸಲು ನಿರ್ಧರಿಸಿದ್ದಾರೆ.

ತಮ್ಮ ನಿಲುವನ್ನು ವ್ಯಕ್ತಪಡಿಸಿರುವ ಪರಿಹಾರ್, “ನೀವು ಕಾರು ಚಲಾಯಿಸುವಾಗ ಹೆಲ್ಮೆಟ್ ಧರಿಸಬೇಕು ಎಂದರೆ ನಾನು ಏನು ಮಾಡಲು ಸಾಧ್ಯ? ನಾನು ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಲೇಬೇಕಾಗುತ್ತದೆ” ಎಂದು ಹೇಳಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಸಹಕರಿಸಲು ಅವರು ಸಿದ್ಧರಿದ್ದರೂ, ಉತ್ತರ ಪ್ರದೇಶದಲ್ಲಿನ ಚುನಾವಣೆ ಮುಕ್ತಾಯಗೊಂಡ ನಂತರ ಈ ಸಮಸ್ಯೆಯ ಕುರಿತು ಗಮನ ಹರಿಸಲಾಗುವುದು ಎಂದು ಸಂಚಾರಿ ಪ್ರಾಧಿಕಾರಿಗಳು ಭರವಸೆ ನೀಡಿರುವುದರಿಂದ ಅವರಿನ್ನೂ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News