ಚುನಾವಣಾ ಬಾಂಡ್ ಹಗರಣದ ಕುರಿತು ನೂತನ ಜಾಹೀರಾತು ಅಭಿಯಾನ ಪ್ರಾರಂಭಿಸಿದ ಕಾಂಗ್ರೆಸ್

Update: 2024-04-20 17:47 GMT

Screengrab from the video | PC: X

ಹೊಸ ದಿಲ್ಲಿ: ಚುನಾವಣಾ ಬಾಂಡ್ ಹಗರಣದ ಬಗ್ಗೆ ಗಮನ ಕೇಂದ್ರೀಕರಿಸಿರುವ ಜಾಹೀರಾತು ಅಭಿಯಾನಕ್ಕೆ ಕಾಂಗ್ರೆಸ್ ಪಕ್ಷ ಚಾಲನೆ ನೀಡಿದ್ದು, ಬಿಜೆಪಿ ಹಾಗೂ ಈಡಿ, ಸಿಬಿಐ ಮತ್ತು ಐಟಿ ನಡುವೆ ಇರುವ ಸಂಪರ್ಕವನ್ನು ಬಯಲು ಮಾಡುವ ಗುರಿ ಹೊಂದಿದೆ. ಈ ಜಾಹೀರಾತನ್ನು ಅದ್ಭುತ ಹಾಗೂ ಪರಿಣಾಮಕಾರಿ ಎಂದು ಪ್ರಶಂಸಿಸಿರುವ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು, ಭ್ರಷ್ಟಾಚಾರ ಆರೋಪದ ಮೇಲೆ ಬೆಳಕು ಚೆಲ್ಲಿದ್ದಾರೆ. ಈ ಜಾಹೀರಾತನ್ನು ಹಲವಾರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲೂ ಹಂಚಿಕೊಂಡಿದ್ದಾರೆ.

ಚುನಾವಣಾ ಪ್ರಕ್ರಿಯೆಯಲ್ಲಿನ ಭ್ರಷ್ಟಾಚಾರ ಆರೋಪದ ಮೇಲೆ ಬೆಳಕು ಚೆಲ್ಲುವುದು ಈ ಜಾಹೀರಾತು ಅಭಿಯಾನದ ಹಿಂದಿರುವ ಕಾಂಗ್ರೆಸ್ ಪಕ್ಷದ ಕಾರ್ಯತಂತ್ರವಾಗಿದೆ. ಈ ಜಾಹೀರಾತು ಚುನಾವಣಾ ಬಾಂಡ್ ಹಗರಣದಲ್ಲಿ ಬಿಜೆಪಿ ಹಾಗೂ ಕೇಂದ್ರೀಯ ತನಿಖಾ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ, ಕೇಂದ್ರೀಯ ತನಿಖಾ ದಳ ಹಾಗೂ ಆದಾಯ ತೆರಿಗೆ ಇಲಾಖೆಗಳೊಂದಿಗಿನ ಉದ್ದೇಶಿತ ಸಂಬಂಧಗಳ ಕುರಿತು ಪ್ರತಿಪಾದಿಸುತ್ತದೆ.

ಈ ಜಾಹೀರಾತು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುವ ಮೂಲಕ ಈ ಜಾಹೀರಾತಿನ ತಲುಪುವಿಕೆ ಮತ್ತು ಪರಿಣಾಮವನ್ನು ಹೆಚ್ಚಿಸಿದೆ.

ಈ ಅಭಿಯಾನವು ಸಾರ್ವಜನಿಕ ವಲಯದಲ್ಲಿ ಚರ್ಚೆ ಮತ್ತು ಪ್ರತಿಕ್ರಿಯೆಗಳ ಕಿಡಿ ಹಚ್ಚಿದೆ. ಕೆಲವರು ಬಿಜೆಪಿಯ ಕೃತ್ಯವನ್ನು ಪ್ರಶ್ನಿಸಿದ್ದರೆ, ಮತ್ತೆ ಕೆಲವರು ಕಾಂಗ್ರೆಸ್ ಪಕ್ಷದ ಹಿಂದಿನ ಸಾಧನೆಯನ್ನು ಟೀಕಿಸಿದ್ದಾರೆ. ಈ ಜಾಹೀರಾತಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಮಹತ್ವದ ಪರಿಣಾಮ ಬೀರಲಿದೆ ಎಂದು ನಿರೀಕ್ಷಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News