ವಿದ್ಯುತ್ ಸಬ್ಸಿಡಿ ಸ್ಥಗಿತ ಕುರಿತು ದಿಲ್ಲಿ ಸಚಿವೆ ಹೇಳಿಕೆ ನೀಡಿದ್ದು ನಿಜವೇ?: ಸತ್ಯಾಂಶ ಇಲ್ಲಿದೆ...

Update: 2024-06-07 12:57 GMT

PC : NDTV

 

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ವಿದ್ಯುತ್ ಸಬ್ಸಿಡಿ ಯೋಜನೆಯನ್ನು ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ದಿಲ್ಲಿ ಸಚಿವೆ ಮತ್ತು ಆಮ್ ಆದ್ಮಿ ಪಕ್ಷದ ನಾಯಕಿ ಅತಿಶಿ ಹೇಳಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆದರೆ ಪಿಟಿಐನ ಸತ್ಯಶೋಧ ತಂಡ (ಫ್ಯಾಕ್ಟ್ ಚೆಕ್ ಡೆಸ್ಕ್) ನಡೆಸಿದ ತನಿಖೆಯಲ್ಲಿ ಇದು ಸುಳ್ಳು ಎನ್ನುವುದು ಸಾಬೀತಾಗಿದೆ. 2023ರ ಎಪ್ರಿಲ್ ತಿಂಗಳಲ್ಲಿ ಸೆರೆಹಿಡಿಯಲಾದ ವಿಡಿಯೊ ತುಣುಕನ್ನು ತಿರುಚಿ ಈ ಸುಳ್ಳು ಪ್ರತಿಪಾದನೆಯೊಂದಿಗೆ ಶೇರ್ ಮಾಡಲಾಗಿದೆ ಎನ್ನುವುದು ಈ ತನಿಖೆಯಿಂದ ದೃಢಪಟ್ಟಿದೆ.

ಮೇ 26ರಂದು ಫೇಸ್ಬುಕ್ ಬಳಕೆದಾರರೊಬ್ಬರು ಷೇರ್ ಮಾಡಿದ ವಿಡಿಯೊದಲ್ಲಿ, ರಾಷ್ಟ್ರರಾಜಧಾನಿಯಲ್ಲಿ ವಿದ್ಯುತ್ ಸಬ್ಸಿಡಿ ಸ್ಥಗಿತಗೊಳಿಸಲು ಎಎಪಿ ಸರ್ಕಾರ ನಿರ್ಧರಿಸಿದೆ ಎಂದು ಹೇಳುತ್ತಿರುವುದು ಕೇಳಿಬರುತ್ತಿದೆ. ಜತೆಗೆ ವಿಡಿಯೊದಲ್ಲಿ, "ದೆಹಲಿಯಲ್ಲಿ ಉಚಿತ ವಿದ್ಯುತ್ ಸ್ಥಗಿತ" ಎಂಬ ಬರಹ ಕೂಡಾ ಕಂಡುಬರುತ್ತಿದೆ. ಜ್ವರ ಹೋಗಿದೆ. ಉಚಿತಕ್ಕಾಗಿ ಮತನೀಡಿದ ಜನತೆಗೆ ಇದು ಅರ್ಹ ನಿರ್ಧಾರ. ಉಚಿತ ಕೊಡುಗೆಗಳು ಆರ್ಥಿಕ ಅಧೋಗತಿಗೆ ತಳ್ಳುವುದು ಖಚಿತ" ಎಂದು ಶೀರ್ಷಿಕೆಯಲ್ಲಿ ಹೇಳಲಾಗಿತ್ತು.

ರಾಷ್ಟ್ರ ರಾಜಧಾನಿಯ 46 ಲಕ್ಷ ಕುಟುಂಬಗಳಿಗೆ ನೀಡುತ್ತಿದ್ದ ವಿದ್ಯುತ್ ಸಬ್ಸಿಡಿ ಇಂದು ಕೊನೆಗೊಂಡಿದೆ. ಅಂದರೆ ನಾಳೆಯಿಂದ ಸಬ್ಸಿಡಿಯುಕ್ತ ವಿದ್ಯುತ್ ಬಿಲ್ ನೀಡಲಾಗುವುದಿಲ್ಲ. ಈ ಹಿಂದೆ ಶೂನ್ಯ ವಿದ್ಯುತ್ ಬಿಲ್ ಪಡೆಯುತ್ತಿರುವವರಿಗೆ ಶೇಕಡ 50ರಷ್ಟು ಹೆಚ್ಚಿನ ಬಿಲ್ ಬರಲಿದೆ ಎಂದು ಅತಿಶಿ ಹೇಳುತ್ತಿರುವುದು ವಿಡಿಯೊದಲ್ಲಿದೆ.

ಆದರೆ ಸತ್ಯಶೋಧಕ ತಂಡ ಇನ್ವಿಡ್ ಟೂಲ್ ಸರ್ಚ್ ಮೂಲಕ ವಿಡಿಯೊವನ್ನು ಪರಿಶೀಲಿಸಿದ್ದು, ಆಗ ಹಲವು ಕೀಫ್ರೇಮ್ಗಳು ಇರುವುದು ಕಂಡುಬಂದಿದೆ. ಗೂಗಲ್ ಲೆನ್ಸ್ ಮೂಲಕ ಇಂಥ ಕೀಫ್ರೇಮ್ ಹರಿಸಿದಾಗ, ಇಂಥದ್ದೇ ಕ್ಲೇಮ್ನ ಹಲವು ವಿಡಿಯೊಗಳ ಹಲವು ಪೋಸ್ಟ್ ಗಳು ಕಂಡುಬಂದಿವೆ. ಇದಕ್ಕೆ ಸಂಬಂಧಿಸಿದ ಪ್ರತಿಕ್ರಿಯೆಗಳನ್ನು ಗಮನಿಸಿದಾಗಲೂ ಇದು ಹಳೆಯ ವಿಡಿಯೊ ಎನ್ನುವುದು ದೃಢಪಟ್ಟಿದೆ.

2023ರ ಏಪ್ರಿಲ್ 14ರಂದು ಮೂಲವಾಗಿ ಆಮ್ ಆದ್ಮಿ ಪಕ್ಷದ ಅಧಿಕೃತ ಹ್ಯಾಂಡಲ್ನಿಂದ ಮಾಡಿದ ಎಕ್ಸ್ ಪೋಸ್ಟ್ನಲ್ಲಿ, ದೆಹಲಿ ಲೆಫ್ಟಿನೆಂಟ್ ಗವರ್ನರ್ ದೆಹಲಿಯಲ್ಲಿ ಉಚಿತ ವಿದ್ಯುತ್ ಸ್ಥಗಿತಗೊಳೀಸಿದ್ದಾರೆ!! 46 ಲಕ್ಷ ಕುಟುಂಬಗಳು, ರೈತರು, ವಕೀಲರು ಮತ್ತು 1984 ದಂಗೆ ಸಂತ್ರಸ್ತರಿಗೆ ಉಚಿತ ವಿದ್ಯುತ್ ಸ್ಥಗಿತಗೊಳ್ಳಲಿದೆ. ಎಲ್ಜಿ ದೆಹಲಿ ಸರ್ಕಾರದ ವಿದ್ಯುತ್ ಸಬ್ಸಿಡಿ ಬಿಲ್ ತೆಗೆದುಕೊಂಡಿದ್ದಾರೆ. ಟಾಟಾ, ಬಿಎಸ್ಇಎಸ್ ಪತ್ರ ಬರೆದು, ಸಬ್ಸಿಡಿ ಬಗ್ಗೆ ಮಾಹಿತಿ ಪಡೆಯದಿದ್ದರೆ, ಬಿಲ್ಲಿಂಗ್ ಆರಂಭಿಸುವುದಾಗಿ ಹೇಳಿದ್ದಾರೆ" ಎಂದು ವಿವರಿಸಲಾಗಿತ್ತು.

ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News