ಪದ್ಮಶ್ರೀ ಪುರಸ್ಕೃತ ದಾರಿಪಳ್ಳಿ ರಾಮಯ್ಯ ನಿಧನ
Update: 2025-04-12 13:31 IST

Photo | X @airnewsalertsv
ಹೈದರಾಬಾದ್: ಪದ್ಮಶ್ರೀ ಪುರಸ್ಕೃತ, ವನಜೀವಿ ರಾಮಯ್ಯ ಎಂದು ಖ್ಯಾತರಾಗಿರುವ ದಾರಿಪಳ್ಳಿ ರಾಮಯ್ಯ ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ಶನಿವಾರ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.
ದಾರಿಪಳ್ಳಿ ರಾಮಯ್ಯ(87) ಹೃದಯಾಘಾತದಿಂದ ಶುಕ್ರವಾರ ರಾತ್ರಿ ಕಮ್ಮಂನ ದಾರಿಪಳ್ಳಿಯ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕೋಟ್ಯಾಂತರ ಸಸಿಗಳನ್ನು ನೆಟ್ಟಿದ್ದ ಅವರ ಸಾಮಾಜಿಕ ಸೇವೆಯನ್ನು ಮೆಚ್ಚಿ 2017ರಲ್ಲಿ ಪದ್ಮಶ್ರೀ ಪುರಸ್ಕಾರವನ್ನು ನೀಡಿ ಗೌರವಿಸಲಾಗಿತ್ತು.
ವನಜೀವಿ ರಾಮಯ್ಯ ಅವರ ನಿಧನಕ್ಕೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಸಂತಾಪವನ್ನು ಸೂಚಿಸಿದ್ದಾರೆ. ಇದು ಭರಿಸಲಾಗದ ನಷ್ಟವಾಗಿದೆ. ರಾಮಯ್ಯ ಹೊಸ ತಲೆಮಾರಿನ ಯುವಕರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.