ಆಸ್ಟ್ರೇಲಿಯಾ ನಾಯಕನನ್ನು ನಿರ್ಲಕ್ಷಿಸಿದರೇ ಪ್ರಧಾನಿ ಮೋದಿ?: ವೈರಲ್ ವಿಡಿಯೋದ ಸತ್ಯಾಂಶ ಇಲ್ಲಿದೆ

Update: 2023-11-20 10:56 GMT

ಹೊಸದಿಲ್ಲಿ: ನಿನ್ನೆ (ರವಿವಾರ) ನಡೆದ ಕ್ರಿಕೆಟ್ ವಿಶ್ವಕಪ್‌ ಫೈನಲ್‌ ನಲ್ಲಿ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕನನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಲಕ್ಷಿಸಿದ್ದಾರೆ ಎಂದು ಪ್ರತಿಪಾದಿಸುವ ವಿಡಿಯೋವನ್ನು ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರು ಹಂಚಿಕೊಂಡಿದ್ದು, ಪ್ರಧಾನಿ ಮೋದಿ ನಡೆಗೆ ಟೀಕೆ ಮಾಡಿದ್ದಾರೆ.

ವಿಶ್ವಕಪ್ ನಂತಹ ಒಂದು ಜಾಗತಿಕ‌ ಕ್ರೀಡೆಯಲ್ಲಿ ಭಾರತ ಸೋತರೂ, ಗೆದ್ದ ಇತರೆ ದೇಶದ ತಂಡವನ್ನು ಅಭಿನಂದಿಸುವ ಗಟ್ಟಿತನ ಬೇಕು. ಅದೂ ಕೂಡಾ ಒಂದು ದೇಶದ ಪ್ರಧಾನಿ ಹೀಗೆ ಮಾಡಬಾರದಿತ್ತು ಎಂದು ನೆಟ್ಟಿಗರೊಬ್ಬರು ವಿಡಿಯೋ ಹಂಚಿಕೊಂಡಿದ್ದಾರೆ. ಹಲವಾರು ನೆಟ್ಟಿಗರು ಇದನ್ನು ವೈರಲ್‌ ಮಾಡಿದ್ದು, ತಮ್ಮ ವಿರೋಧ ವ್ಯಕ್ತಪಡಿಸಿದ್ದರು.

Fact Check:

ಆದರೆ, ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಉಪ ಪ್ರಧಾನಿ ರಿಚರ್ಡ್‌ ಮಾರ್ಲ್ಸ್‌ ಅವರು ವಿಶ್ವಕಪ್‌ ಟ್ರೋಫಿ ಪ್ರದಾನ ಮಾಡಿ ಬೆನ್ನು ತಟ್ಟಿ ಅಭಿನಂದಿಸಿದ್ದರು.

ಆದರೆ, ಕೆಲವರು ಪ್ರಧಾನಿ ಮೋದಿ ಅವರು ಪ್ಯಾಟ್‌ ಕಮಿನ್ಸ್‌ ಬೆನ್ನು ತಟ್ಟುವ ಹಾಗೂ ಅಭಿನಂದಿಸುವ ದೃಶ್ಯವನ್ನು ಎಡಿಟ್‌ ಮಾಡಿ ವೇದಿಕೆಯಿಂದ ಕೆಳಗಿಳಿಯುತ್ತಿರುವ ದೃಶ್ಯವನ್ನು ಮಾತ್ರ ಹಂಚಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News