ಭಾರತೀಯ ವಿದ್ವಾಂಸೆ ಗಾಯತ್ರಿ ಚಕ್ರವರ್ತಿ ಸ್ಪಿವಾಕ್ ಮುಡಿಗೇರಿದ 2025ರ ಹೋಲ್‌ ಬರ್ಗ್ ಪ್ರಶಸ್ತಿ

Update: 2025-03-16 22:39 IST
ಭಾರತೀಯ ವಿದ್ವಾಂಸೆ ಗಾಯತ್ರಿ ಚಕ್ರವರ್ತಿ ಸ್ಪಿವಾಕ್ ಮುಡಿಗೇರಿದ 2025ರ ಹೋಲ್‌ ಬರ್ಗ್ ಪ್ರಶಸ್ತಿ

PC : indianexpress.com

  • whatsapp icon

ಹೊಸದಿಲ್ಲಿ: ಭಾರತೀಯ ವಿದ್ವಾಂಸೆ ಮತ್ತು ಸಾಹಿತ್ಯ ಸಿದ್ಧಾಂತಿ ಗಾಯತ್ರಿ ಚಕ್ರವರ್ತಿ ಸ್ಪಿವಾಕ್ ಅವರು ತುಲನಾತ್ಮಕ ಸಾಹಿತ್ಯ, ಅನುವಾದ, ವಸಾಹತುಶಾಹಿ ಯುಗದ ನಂತರ ಅಧ್ಯಯನಗಳು, ರಾಜಕೀಯ ತತ್ವಶಾಸ್ತ್ರ ಮತ್ತು ಸ್ತ್ರೀವಾದಿ ಸಿದ್ಧಾಂತದಲ್ಲಿ ತನ್ನ ಮಹತ್ವದ ಸಂಶೋಧನೆಗಳಿಗಾಗಿ 2025ರ ಹೋಲ್‌ ಬರ್ಗ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಜೂ.8ರಂದು ನಾರ್ವೆಯ ಬರ್ಗನ್ ವಿವಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸ್ಪಿವಾಕ್ ಅವರಿಗೆ ಪ್ರಶಸ್ತಿಯನ್ನು ಪ್ರದಾನಿಸಲಾಗುವುದು.

5,40,000 ಡಾಲರ್ ನಗದು ಬಹುಮಾನವನ್ನು ಒಳಗೊಂಡಿರುವ ಈ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಮಾನವೀಯತೆ,ಸಮಾಜ ವಿಜ್ಞಾನ, ಕಾನೂನು ಅಥವಾ ಧರ್ಮಶಾಸ್ತ್ರ ಕ್ಷೇತ್ರಗಳಲ್ಲಿಯ ಸಂಶೋಧಕರೋರ್ವರಿಗೆ ವಾರ್ಷಿಕವಾಗಿ ನೀಡಲಾಗುತ್ತದೆ. ನಾರ್ವೆ ಸರಕಾರದ ಧನಸಹಾಯದ ಈ ಪ್ರಶಸ್ತಿಯನ್ನು ಅಲ್ಲಿಯ ಶಿಕ್ಷಣ ಮತ್ತು ಸಂಶೋಧನಾ ಸಚಿವಾಲಯದ ಪರವಾಗಿ ಬರ್ಗನ್ ವಿವಿಯು ನಿರ್ವಹಿಸುತ್ತದೆ.

1943, ಫೆ.24ರಂದು ಕೋಲ್ಕತಾದಲ್ಲಿ ಜನಿಸಿದ್ದು, ಕೋಲ್ಕತಾ ವಿವಿ ಮತ್ತು ಕಾರ್ನೆಲ್ ವಿವಿಯ ಹಳೆಯ ವಿದ್ಯಾರ್ಥಿನಿಯಾಗಿರುವ ಸ್ಪಿವಾಕ್ ಪ್ರಸ್ತುತ ಕೊಲಂಬಿಯಾ ವಿವಿಯಲ್ಲಿ ಮಾನವ ಸಂಸ್ಕೃತಿ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿದ್ದಾರೆ. ಅವರನ್ನು ಅತ್ಯಂತ ಪ್ರಭಾವಿ ಜಾಗತಿಕ ಬುದ್ಧಿಜೀವಿಗಳಲ್ಲಿ ಓರ್ವರೆಂದು ಪರಿಗಣಿಸಲಾಗಿದೆ.

ಒಂಭತ್ತು ಪುಸ್ತಕಗಳನ್ನು ಬರೆದಿರುವ ಸ್ಪಿವಾಕ್ ಇತರ ಹಲವಾರು ಕೃತಿಗಳನ್ನು ಸಂಪಾದಿಸಿದ್ದಾರೆ ಅಥವಾ ಅನುವಾದಿಸಿದ್ದಾರೆ. ಅವರ ಸಂಶೋಧನೆ 20ಕ್ಕೂ ಅಧಿಕ ಭಾಷೆಗಳಿಗೆ ಅನುವಾದಗೊಂಡಿದ್ದು,ಅವರು 50ಕ್ಕೂ ಅಧಿಕ ದೇಶಗಳಲ್ಲಿ ಬೋಧಿಸಿದ್ದಾರೆ ಅಥವಾ ಉಪನ್ಯಾಸಗಳನ್ನು ನೀಡಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News