ರಾಜಸ್ಥಾನ | ಕೊಳವೆ ಬಾವಿಗೆ ಬಿದ್ದಿರುವ 3 ವರ್ಷದ ಬಾಲಕಿ; 9ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ

Photo credit: NDTV
ಜೈಪುರ: ರಾಜಸ್ಥಾನದ ಕೊಟ್‌ಪುಟ್ಲಿಯಲ್ಲಿ 700 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿರುವ ಮೂರು ವರ್ಷದ ಬಾಲಕಿಯ ರಕ್ಷಣಾ ಕಾರ್ಯಾಚರಣೆ 9 ನೇ ದಿನಕ್ಕೆ ಕಾಲಿಟ್ಟಿದೆ.
ಬಾಲಕಿ ಚೇತನಾ 120 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದು, ಗುಂಡಿ ಮಾಡಿ ಎನ್ ಡಿಆರ್ ಎಫ್ ಸಿಬ್ಬಂದಿ ಸುರಂಗ ತೋಡುತ್ತಿದ್ದಾರೆ.
ಸೋಮವಾರ ಬಾಲಕಿಯನ್ನು ಹೊರಗೆ ಕರೆದು ತರಲಾಗುವುದು ಎಂದು ಆಡಳಿತ ಮತ್ತು ಎನ್‌ಡಿಆರ್‌ಎಫ್ ಹೇಳಿಕೊಂಡಿದ್ದರೂ ಅದು ಇದುವರೆಗೂ ಸಾಧ್ಯವಾಗಲಿಲ್ಲ. ಇದರಿಂದ ಬೇಸತ್ತ ಬಾಲಕಿ ಕುಟುಂಬಸ್ಥರು, ಅಧಿಕಾರಿಗಳು ತಡ ಮಾಡಿದ್ದರಿಂದ ಬಾಲಕಿ ರಕ್ಷಣೆ ಸಾಧ್ಯವಾಗಿಲ್ಲ ಎಂದು ಆರೋಪಿಸಿದ್ದಾರೆ.
ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಡಳಿತದ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಕ್ರಮಕೈಗೊಂಡಿದ್ದರೆ, ಬಾಲಕಿಯನ್ನು ಮೊದಲೇ ಹೊರತೆಗೆಯ ಬಹುದಿತ್ತು ಎಂದು ಅವರು ಹೇಳುತ್ತಾರೆ.
ಕುಟುಂಬ ಸದಸ್ಯರ ಅಸಮಾಧಾನ ಬೆಳಕಿಗೆ ಬಂದ ನಂತರ ಜಿಲ್ಲಾಧಿಕಾರಿ ಕಲ್ಪನಾ ಅಗರ್ವಾಲ್ ಸೋಮವಾರ ಸಂಜೆ ಮತ್ತೆ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ರಕ್ಷಣಾ ಕಾರ್ಯಾಚರಣೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿಸಿದರು.
ʼನಾವು ಪ್ರತಿ ಹಂತದಲ್ಲೂ ಉತ್ತಮ ಕೆಲಸ ಮಾಡುತ್ತಿದ್ದೇವೆ, ಆದರೆ ಈ ರಕ್ಷಣಾ ಕಾರ್ಯಾಚರಣೆ ತುಂಬಾ ಕಷ್ಟಕರವಾಗಿದೆ . ಆದ್ದರಿಂದ ಪೂರ್ಣಗೊಳ್ಳಲು ಸಮಯ ತೆಗೆದುಕೊಳ್ಳುತ್ತಿದೆ ʼ ಎಂದು ಜಿಲ್ಲಾಧಿಕಾರಿ ಬಾಲಕಿ ಕುಟುಂಬಸ್ಥರಿಗೆ ಹೇಳಿದ್ದಾರೆ