ಗ್ಲೋಬಲ್ ಚೆಸ್ ಲೀಗ್ | ಅಮೆರಿಕನ್ ಗ್ಯಾಂಬಿಟ್ಸ್ ಖರೀದಿಸಿದ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್
ಹೊಸದಿಲ್ಲಿ: ಟೆಕ್ ಮಹೀಂದ್ರಾ ಹಾಗೂ ಇಂಟರ್ ನ್ಯಾಷನಲ್ ಚೆಸ್ ಫೆಡರೇಶನ್ ಜಂಟಿ ಸಹಭಾಗಿತ್ವದ ಗ್ಲೋಬಲ್ ಚೆಸ್ ಲೀಗ್‌ನ ಎರಡನೆ ಆವೃತ್ತಿಯಲ್ಲಿ ಪಾಲ್ಗೊಳ್ಳಲಿರುವ ನೂತನ ತಂಡವಾದ ಅಮೆರಿಕನ್ ಗ್ಯಾಂಬಿಟ್ಸ್‌ನ ಸಹ ಮಾಲಕತ್ವವನ್ನು ಭಾರತೀಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಖರೀದಿಸಿದ್ದಾರೆ ಎಂದು ವರದಿಯಾಗಿದೆ.
ಅಕ್ಟೋಬರ್ 3ರಿಂದ 12ರವರೆಗೆ ಲಂಡನ್‌ನಲ್ಲಿ ನಡೆಯಲಿರುವ ಗ್ಲೋಬಲ್ ಚೆಸ್ ಲೀಗ್‌ನ ಎರಡನೆ ಆವೃತ್ತಿಯಲ್ಲಿ ಒಟ್ಟು 6 ಫ್ರಾಂಚೈಸಿಗಳನ್ನು ಸೋಮವಾರ ಬಹಿರಂಗಗೊಳಿಸಲಾಯಿತು.
ಅಮೆರಿಕನ್ ಗ್ಯಾಂಬಿಟ್ಸ್ ತಂಡದ ಮಾಲಕತ್ವವನ್ನು ಹೊಂದಿರುವ ಪ್ರತಿಷ್ಠಿತ ಉದ್ಯಮಿಗಳಾದ ಪ್ರಚುರ ಪಿ.ಪಿ., ವೆಂಕಟ್ ಕೆ. ನಾರಾಯಣ್ ಹಾಗೂ ಅಶ್ವಿನ್ ಹೊಂದಿದ್ದಾರೆ. ಅವರು ಚಿಂಗಾರಿ ಗಲ್ಫ್ ಟೈಟನ್ಸ್ ಬದಲಿಗೆ ಈ ತಂಡವನ್ನು ಖರೀದಿಸಿದ್ದಾರೆ.
ಗ್ಲೋಬಲ್ ಚೆಸ್ ಫೆಡರೇಶನ್‌ನ ಇತರ ಐದು ಫ್ರಾಂಚೈಸಿಗಳು ಆಲ್ಪೈನ್ ಎಸ್‌ಜಿ ಪೈಪರ್ಸ್, ಪಿಬಿಜಿ ಅಲಾಸ್ಕನ್ ನೈಟ್ಸ್, ಗ್ಯಾಂಜಸ್ ಗ್ರ್ಯಾಂಡ್ ಮಾಸ್ಟರ್ಸ್, ಹಾಲಿ ಚಾಂಪಿಯನ್‌ಗಳಾದ ತ್ರಿವೇಣಿ ಕಾಂಟಿನೆಂಟಲ್ ಕಿಂಗ್ಸ್ ಹಾಗೂ ಮುಂಬಾ ಮಾಸ್ಟರ್ಸ್ ಆಗಿವೆ. ಈ ಐದು ತಂಡಗಳು ಎರಡನೇ ಆವೃತ್ತಿಯಲ್ಲೂ ಪಾಲ್ಗೊಳ್ಳುತ್ತಿವೆ.