ಶಂಕಿತ ಮಾನವ ಕಳ್ಳಸಾಗಣೆ ಪ್ರಕರಣ: ದಿಂಗುಚಾ ಪ್ರಕರಣದ ಪ್ರಮುಖ ಆರೋಪಿಯ ಕೈವಾಡ ಶಂಕೆ

Update: 2023-12-25 03:07 GMT

Photo: twitter.com/thetribunechd

ಅಹ್ಮದಾಬಾದ್: 2022ರ ದಿಂಗುಚಾ ಪ್ರಕರಣದಲ್ಲಿ ಗುಜರಾತ್ ಪೊಲೀಸರು ಕೈಬಿಟ್ಟಿದ್ದ ಪ್ರಮುಖ ಆರೋಪಿ ಹೈದರಾಬಾದ್ ಮೂಲಕ ಶಶಿ ಕಿರಣ್ ರೆಡ್ಡಿ, ಮಾನವ ಕಳ್ಳಸಾಗಾಣಿಕೆ ಶಂಕೆಯಿಂದ ಫ್ರಾನ್ಸ್ ನಲ್ಲಿ ತಡೆಹಿಡಿಯಲ್ಪಟ್ಟ ದುಬೈ- ನಿಕರಾಗುವ ವಿಮಾನದಲ್ಲಿ 303 ಮಂದಿ ಭಾರತೀಯರನ್ನು ಸಾಗಿಸುತ್ತಿದ್ದ ಪ್ರಕರಣದ ಸೂತ್ರಧಾರನಾಗಿರುವ ಸಾಧ್ಯತೆ ಇದೆ ಎಂದು ಭಾರತೀಯ ಭದ್ರತಾ ಏಜೆನ್ಸಿಗಳು ಹೇಳಿವೆ.

ಕಳೆದ ವರ್ಷದ ದಿಂಗುಚಾ ಪ್ರಕರಣದಲ್ಲಿ, ಕೆನಡಾದಿಂದ ಅಮೆರಿಕದ ಗಡಿಗೆ ನುಸುಳುವ ಪ್ರಯತ್ನದಲ್ಲಿ ದಂಪತಿ ಹಾಗೂ ಅವರ ಇಬ್ಬರು ಮಕ್ಕಳು ಚಳಿಯಿಂದ ಮೃತಪಟ್ಟಿದ್ದರು. ಇದು ಗುಜರಾತ್ ನ ಗಾಂಧಿನಗರದಿಂದ ಮಾನವ ಕಳ್ಳಸಾಗಾಣಿಕೆ ಮಾಡುವ ಜಾಲದ ಭಾಗವಾಗಿತ್ತು.

ಫ್ರಾನ್ಸ್ ನ ವಟ್ರಿಯಲ್ಲಿ ಕಳೆದ ಶುಕ್ರವಾರದಿಂದ ಅಲ್ಲಿನ ಭದ್ರತಾ ಏಜೆನ್ಸಿಗಳ ವಶದಲ್ಲಿರುವ ವಿಮಾನದಲ್ಲಿ ಇರುವ ಪ್ರಯಾಣಿಕರ ಪೈಕಿ 96 ಮಂದಿ ಗುಜರಾತಿನವರು ಎಂದು ಮೂಲಗಳಿಂದ ತಿಳಿದು ಬಂದಿದೆ.

ಕಳೆದ 15 ವರ್ಷಗಳಿಂದ ಮಾನವ ಕಳ್ಳಸಾಗಾಣಿಕೆ ಜಾಲವನ್ನು ನಡೆಸುತ್ತಿರುವ ರೆಡ್ಡಿ, ದುಬೈನಿಂದ ನಿಕರಾಗುವಕ್ಕೆ ಖಾಸಗಿ ವಿಮಾನವನ್ನು ಕಳುಹಿಸಿದ್ದ. ಅಲ್ಲಿಂದ ಅಕ್ರಮವಾಗಿ ಜನರನ್ನು ರಸ್ತೆ ಮತ್ತು ಸಮುದ್ರ ಮಾರ್ಗದ ಮೂಲಕ ಅಮೆರಿಕಕ್ಕೆ ಕಳುಹಿಸುತ್ತಿದ್ದ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಸುಮಾರು 800 ಮಂದಿ ಭಾರತೀಯರನ್ನು ಅಮೆರಿಕಕ್ಕೆ ಕಳುಹಿಸುವ ಉದ್ದೇಶದಿಂದ ಕಳೆದ ಎರಡು ತಿಂಗಳಲ್ಲಿ 8-10 ತಂಡಗಳನ್ನು ನಿರಕಾಗುವಕ್ಕೆ ಕಳುಹಿಸಲಾಗಿತ್ತು ಎಂದು ಹೇಳಲಾಗಿದೆ.

ದಿಂಗುಚಾ ಪ್ರಕರಣದ ಸಂತ್ರಸ್ತ ಜಗದೀಶ್ ಪಟೇಲ್ ಎಂಬಾತನ ಸಹೋದರ ಮಹೇಂದ್ರ ಅಲಿಯಾಸ್ ಮಹೇಂದ್ರ ದಿಂಗುಚಾ ಈ ಪ್ರವಾಸವನ್ನು ವ್ಯವಸ್ಥೆಗೊಳಿಸಿದ್ದ. "ಮಹೇಂದ್ರ ಈ ಮೊದಲು ರೆಡ್ಡಿ ಜತೆ ಕೆಲಸ ಮಡುತ್ತಿದ್ದು, ಗುಜರಾತ್ನಿಂದ ಅಮೆರಿಕಕ್ಕೆ ಸಾವಿರಾರು ಮಂದಿಯನ್ನು ಅಕ್ರಮವಾಗಿ ಕಳುಹಿಸಿದ್ದ. ರೆಡ್ಡಿ ಈ ಸಂದರ್ಭದಲ್ಲಿ ಜಗದೀಶ್ ಮತ್ತು ಆತನ ಕುಟುಂಬದ ದಾಖಲೆಗಳನ್ನು ಸಿದ್ಧಪಡಿಸಿ, ಅಕ್ರಮವಾಗಿ ಅಮೆರಿಕದ ಗಡಿ ದಾಟಲು ಸಹಕರಿಸಿದ್ದ" ಎಂದು ಉನ್ನತ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News