ಹಣದುಬ್ಬರದಿಂದ ವೈಯಕ್ತಿಕ ಬಳಕೆ ಕುಸಿತ, ಹೂಡಿಕೆಗೆ ಪೆಟ್ಟು: RBI ವರದಿ

Update: 2023-06-24 09:51 GMT

ಹೊಸದಿಲ್ಲಿ: ದೇಶದಲ್ಲಿ ಹಣದುಬ್ಬರದ ಕಾರಣದಿಂದ ವೈಯಕ್ತಿಕ ಬಳಕೆ ಕುಸಿದಿದ್ದು, ಇದರ ಪರಿಣಾಮವಾಗಿ ಉದ್ಯಮಿಗಳು, ಬಳಕೆ ಸಾಮಥ್ರ್ಯ ಹೆಚ್ಚಿದರೂ, ದೊಡ್ಡ ಹೂಡಿಕೆಗಳನ್ನು ಮಾಡುತ್ತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ವರದಿ ಅಭಿಪ್ರಾಯಪಟ್ಟಿದೆ.

"ಹಣದುಬ್ಬರವನ್ನು ಕಡಿತಗೊಳಿಸುವುದು ಮತ್ತು ಹಣದುಬ್ಬರ ಸ್ಥಿರತೆಯ ನಿರೀಕ್ಷೆಗಳಿಉ ಗ್ರಾಹಕ ವೆಚ್ಚದ ಪುನಶ್ಚೇತನಕ್ಕೆ ಕಾರಣವಾಗಲಿದೆ ಮತ್ತು ಕಾರ್ಪೊರೇಟ್ ಆದಾಯ ಹೆಚ್ಚಳಕ್ಕೆ ಹಾಗೂ ಲಾಭ ಹೆಚ್ಚಳಕ್ಕೆ ಕಾರಣವಾಗಲಿದೆ. ಇದು ಖಾಸಗಿ ಕಾರ್ಪೊರೇಟ್ ಜಗತ್ತಿಗೆ ಉತ್ತಮ ಉತ್ತೇಜಕ" ಎಂದು ಆರ್ಥಿಕತೆಯ ಸ್ಥಿತಿಗತಿ ಬಗೆಗಿನ ಆರ್‍ಬಿಐ ವರದಿ ಹೇಳಿದೆ.

ಹಣದುಬ್ಬರದಿಂದಾಗಿ ವೈಯಕ್ತಿಕ ಬಳಕೆ ಮತ್ತು ವೆಚ್ಚ ಕಡಿಮೆಯಾಗುತ್ತಿದೆ ಎಂದು ತೋರಿಸಲು ವರದಿ ರಾಷ್ಟ್ರೀಯ ಲೆಕ್ಕಪತ್ರಗಳ ಅಂಕಿ ಅಂಶ ಹಾಗೂ ಕಾರ್ಪೊರೇಟ್ ಹಣಕಾಸು ಫಲಿತಾಂಶಗಳನ್ನು ಉಲ್ಲೇಖಿಸಿದೆ. ಆದರೆ ಹಣಕಾಸು ಸಚಿವಾಲಯದ ಅಧಿಕಾರಿಗಳು, ದೇಶದಲ್ಲಿ ಬಳಕೆ ಬೇಡಿಕೆ ಇನ್ನೂ ಉತ್ತಮವಾಗಿಯೇ ಇದೆ ಎಂದು ಪ್ರತಿಪಾದಿಸಿದ್ದು, ಖಾಸಗಿ ವಲಯದ ಹೂಡಿಕೆ ಹೆಚ್ಚುತ್ತಿರುವುದು ಗಮನಕ್ಕೆ ಬರುತ್ತಿದೆ ಎಂದು ವಿಶ್ಲೇಷಿಸುತ್ತಿದ್ದಾರೆ.

ಆರ್‍ಬಿಐನ ನೀತಿ ದರಗಳು "ಧೀರ್ಘಾವಧಿಗೆ ಅಧಿಕ ಮಟ್ಟದಲ್ಲೇ ಮುಂದುವರಿಯಲಿವೆ ಎನ್ನುವುದರ ಸೂಚಕ ಇದಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಸಾಂಕ್ರಾಮಿಕ ಬಳಿಕ ಏರಿಸಲಾದ ಬಡ್ಡಿದರ ಸದ್ಯಕ್ಕೆ ಹಿಂದಕ್ಕೆ ಬರುವ ಸಾಧ್ಯತೆ ಇಲ್ಲ ಎನ್ನುವುದರ ಸೂಚಕ ಇದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News