ಪ್ರಧಾನಿ ಮೋದಿಯನ್ನು ಟೀಕಿಸುವ ʼಲಾಸ್ಟ್ ವೀಕ್ ಟು ನೈಟ್ ವಿದ್ ಜಾನ್ ಒಲಿವರ್ʼ ಕಾರ್ಯಕ್ರಮ ಕೈಬಿಟ್ಟ ಜಿಯೊ ಸಿನಿಮಾ
ಹೊಸದಿಲ್ಲಿ : ಜಾನ್ ಇಲಿವರ್ ಅವರ ʼಲಾಸ್ಟ್ ವೀಕ್ ಟು ನೈಟ್ ವಿದ್ ಜಾನ್ ಒಲಿವರ್ʼ ಕಾರ್ಯಕ್ರಮದ ಇತ್ತೀಚಿನ ಕಂತನ್ನು ಜಿಯೊ ಸಿನಿಮಾ ಕೈಬಿಟ್ಟಿರುವುದು ಬಹಿರಂಗವಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ʼಇಂಡಿಯನ್ ಎಲೆಕ್ಷನ್ಸ್, ಟ್ರಂಪ್ & ರೆಡ್ ಲಾಬ್‍ಸ್ಟರ್ʼ ಹೆಸರಿನ ಕಾರ್ಯಕ್ರಮ ಸೋಮವಾರ ಎಚ್‍ಬಿಓದ ಅಧಿಕೃತ ಪ್ರಸಾರ ಪಾಲುದಾರ ವಾಹಿನಿಯಾದ ಜಿಯೊ ಸಿನಿಮಾದಲ್ಲಿ ಪ್ರಸಾರವಾಗಬೇಕಿತ್ತು. ಆದರೆ ಇದನ್ನು ಕೈಬಿಡಲಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ನಿಯಂತ್ರಣದ ವಯಾಕಾಂ18 ವಾರ್ನರ್ ಬ್ರೋಸ್ ಜತೆ ಒಪ್ಪಂದ ಮಾಡಿಕೊಂಡು ಜನಪ್ರಿಯ ಎಚ್‍ಬಿಓ ಕಾರ್ಯಕ್ರಮಗಳು ಹಾಗೂ ಚಲನಚಿತ್ರಗಳನ್ನು ಜಿಯೊ ಸಿನಿಮಾದಲ್ಲಿ ಪ್ರಸಾರ ಮಾಡುತ್ತಿತ್ತು. ಜೂನ್ 4ರಂದು(ಮಂಗಳವಾರ) ಭಾರತದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಹೊರಬೀಳಲಿರುವ ಹಿನ್ನೆಲೆಯಲ್ಲಿ ಜಿಯೊಸಿನಿಮಾದ ಈ ನಡೆ ಕುತೂಹಲಕ್ಕೆ ಕಾರಣವಾಗಿದೆ.
ಈ ಕಾರ್ಯಕ್ರಮದ 13ನೇ ಕಂತನ್ನು ಜೂನ್ 2ರಂದು ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಲಾಗಿದೆ. ಆದರೆ ಇದು ಭಾರತದಲ್ಲಿ ಇನ್ನೂ ಲಭ್ಯವಿಲ್ಲ. ಜೂನ್ 6ರಂದು ಇದು ಸಾರ್ವಜನಿಕರಿಗೆ ಲಭ್ಯವಾಗಲಿದೆ. ಎಚ್‍ಬಿಓದ ಬದಲಾದ ನೀತಿಯಂತೆ, ಚಂದಾದಾರಿಕೆ ಹೆಚ್ಚಿಸುವ ಉದ್ದೇಶದಿಂದ ಇಡೀ ಕಾರ್ಯಕ್ರಮ ಅದು ಪ್ರಸಾರವಾದ ಒಂದು ದಿನ ಬಳಿಕ ಯೂಟ್ಯೂಬ್‍ನಲ್ಲಿ ಲಭ್ಯವಾಗುತ್ತದೆ. ಇದೀಗ ಈ ಕಾರ್ಯಕ್ರಮ ಯೂಟ್ಯೂಬ್‍ನಲ್ಲಿ ಪ್ರತಿ ಗುರುವಾರ ಮಾತ್ರ ಲಭ್ಯ.
ಆದಾಗ್ಯೂ ವಯಾಕಾಂ 18 ವಾರ್ನರ್ ಬ್ರೋಸ್ ಜತೆಗೆ ಮಾಡಿಕೊಂಡ ಒಪ್ಪಂದದಂತೆ ಜಿಯೊ ಸಿನಿಮಾದಲ್ಲಿ ಇದು ಭಾರತದಲ್ಲಿ ಲಭ್ಯವಾಗುತ್ತಿತ್ತು. ಆದರೆ ಮೇ 19ರಂದು ಪ್ರಸಾರವಾದ ಕಾರ್ನ್ ಹೆಸರಿನ ಕಾರ್ಯಕ್ರಮದ ವೀಡಿಯೊ ಮಾತ್ರ ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಆಗಿದೆ. ಹೊಸ ಕಂತನ್ನು ಇನ್ನೂ ಅಪ್‍ಲೋಡ್ ಮಾಡಿಲ್ಲ.
ಸೌಜನ್ಯ : thenewsminute.com
ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ http://www.varthabharati.in ನೋಡ್ತಾ ಇರಿ.