ವಯನಾಡ್ ಭೂಕುಸಿತ ಸಂತ್ರಸ್ತರ ಸಾಲ ರೈಟ್ ಆಫ್ ಮಾಡಿ : ಬ್ಯಾಂಕರ್ ಗಳನ್ನು ಆಗ್ರಹಿಸಿದ ಸಿಎಂ ಪಿಣರಾಯಿ ವಿಜಯನ್

Update: 2024-08-19 16:21 GMT

ಪಿಣರಾಯಿ ವಿಜಯನ್ | PC : PTI

ಹೊಸದಿಲ್ಲಿ : ವಯನಾಡ್ ಭೂಕುಸಿತ ಸಂತ್ರಸ್ತರ ಸಾಲವನ್ನು ರೈಟ್ ಆಫ್ ಮಾಡುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ರಾಜ್ಯದ ಬ್ಯಾಂಕರ್ಗಳನ್ನು ಆಗ್ರಹಿಸಿದ್ದಾರೆ.

ಮರುಪಾವತಿ ಅವಧಿಯನ್ನು ವಿಸ್ತರಿಸುವುದರಿಂದ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ ಎಂದು ಕೂಡ ಅವರು ಹೇಳಿದ್ದಾರೆ.

ಭೂಕುಸಿತದಲ್ಲಿ ಬದುಕಿ ಉಳಿದವರ ಬ್ಯಾಂಕ್ ಖಾತೆಗಳಿಂದ ಬ್ಯಾಂಕ್‌ ಗಳು ಸಾಲದ ಕಂತನ್ನು ಮುರಿದುಕೊಳ್ಳುತ್ತಿರುವ ವರದಿಯ ನಡುವೆ ವಿಜಯನ್ ಅವರ ಈ ಆಗ್ರಹ ವ್ಯಕ್ತಪಡಿಸಿದ್ದಾರೆ.

ರಾಜ್ಯ ಮಟ್ಟದ ಬ್ಯಾಂಕರ್ಗಳ ಸಮಿತಿ ಸಭೆಯಲ್ಲಿ ವಿಜಯನ್, ಸಾಲ ಮನ್ನಾ ಮಾಡುವುದರಿಂದ ಬ್ಯಾಂಕ್‌ ಗಳ ಮೇಲೆ ಅತಿಯಾದ ಹೊರೆ ಬೀಳಲಾರದು ಎಂದು ಹೇಳಿದ್ದಾರೆ. ಭೂಕುಸಿತದ ವಲಯದಲ್ಲಿ ಬಡ್ಡಿ ಸಡಿಲಿಕೆ ಅಥವಾ ತಿಂಗಳ ಕಂತು ಪಾವತಿಸುವ ಸಮಯದ ವಿಸ್ತರಣೆ ಪರಿಹಾರ ಒದಗಿಸಲಾರದು ಎಂದು ವಿಜಯನ್ ಹೇಳಿದ್ದಾರೆ.

ಸಾಲ ಪಡೆದುಕೊಂಡವರಲ್ಲಿ ಹಲವರು ಮೃತಪಟ್ಟಿದ್ದಾರೆ. ದುರಂತದ ಬಳಿಕ ಅವರ ಭೂಮಿ ಬಳಕೆಗ ಯೋಗ್ಯವಾಗಿಲ್ಲ. ನಾವು ಮಾಡಬಹುದಾದ ಏಕೈಕ ಸಹಾಯವೆಂದರೆ ಭೂಕುಸಿತ ಪೀಡಿತ ಈ ಪ್ರದೇಶದ ಜನರು ತೆಗೆದುಕೊಂಡ ಸಾಲವನ್ನು ಸಂಪೂರ್ಣ ರೈಟ್ ಆಫ್ ಮಾಡುವುದು ಎಂದು ಅವರು ಗಮನ ಸೆಳೆದರು.

ಬದುಕಿ ಉಳಿದವರ ಬ್ಯಾಂಕ್ ಖಾತೆಯಿಂದ ಸಾಲದ ಕಂತನ್ನು ಮುರಿದ ನಿರ್ದಿಷ್ಟ ಬ್ಯಾಂಕ್‌ ಗಳ ಕುರಿತು ಪಿಣರಾಯಿ ವಿಜಯನ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News