ಕಾನ್‌ಸ್ಟೇಬಲ್‌ ಸಲೀಂ ಪಿಂಜಾರಿಗೆ ʼರಿಯಲ್ ಮ್ಯಾನ್‌ ಆಫ್‌ ದ ಮ್ಯಾಚ್ʼ ಎಂದ ಮುಂಬೈ ಪೊಲೀಸ್!

Update: 2024-07-08 15:43 GMT

PC : @MumbaiPolice / instagram.com

ಮುಂಬೈ: ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ, ವಿಶ್ವಕಪ್ ಟ್ರೋಫಿಯೊಂದಿಗೆ ಮುಂಬೈಗೆ ಆಗಮಿಸಿದ ಭಾರತೀಯ ಕ್ರಿಕೆಟ್ ತಂಡ ನಾರಿಮನ್ ಪಾಯಿಂಟ್‌ನಿಂದ ವಾಂಖೇಡೆ ಕ್ರೀಡಾಂಗಣದವರೆಗೆ ವಿಜಯೋತ್ಸವ ಮೆರವಣಿಗೆ ನಡೆಸಿತ್ತು. ಈ ವಿಜಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮಹಿಳೆಯೊಬ್ಬರು ಆ ಭಾರಿ ಜನರ ದಟ್ಟಣೆಯ ನಡುವೆ ಪ್ರಜ್ಞೆ ತಪ್ಪುವ ಸ್ಥಿತಿಗೆ ತಲುಪಿದ್ದಾಗ, ಸಮಯ ಪ್ರಜ್ಞೆ ಮೆರೆದಿದ್ದ ಪೊಲೀಸ್ ಕಾನ್‌ಸ್ಟೇಬಲ್ ಸಲೀಂ ಪಿಂಜಾರಿ, ಆ ಮಹಿಳೆಯನ್ನು ರಕ್ಷಿಸಿದ್ದರು.

ಪೊಲೀಸ್ ಕಾನ್‌ಸ್ಟೇಬಲ್ ಸಲೀಂ ಪಿಂಜಾರಿ ಪ್ರದರ್ಶಿಸಿದ ಸಮಯ ಪ್ರಜ್ಞೆಯನ್ನು ಅಭಿನಂದಿಸಿರುವ ಮುಂಬೈ ಪೊಲೀಸ್, "ವಿಜಯೋತ್ಸವ ಮೆರವಣಿಗೆಯ ರಿಯಲ್ ಮ್ಯಾನ್‌ ಆಫ್‌ ದ ಮ್ಯಾಚ್" ಎಂದು ಅವರನ್ನು ಶ್ಲಾಘಿಸಿದೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಮುಂಬೈ ಪೊಲೀಸರು, "ವಿಜಯೋತ್ಸವ ಮೆರವಣಿಗೆ ಬಂದೋಬಸ್ತ್ ಸಮಯದ ರಿಯಲ್ ಮ್ಯಾನ್‌ ಆಫ್‌ ದ ಮ್ಯಾಚ್ ಸಲೀಂ ಪಿಂಜಾರಿ. ಜನಸಾಗರದ ಸುರಕ್ಷತೆಯನ್ನು ನೋಡಿಕೊಳ್ಳುತ್ತಾ, ಪ್ರಜ್ಞಾಹೀನರಾಗುತ್ತಿದ್ದ ಮಹಿಳೆಯನ್ನು ಗುರುತಿಸಿ, ಅವರಿಗೆ ನೆರವು ನೀಡಿರುವ ಮೊದಲ ವ್ಯಕ್ತಿ ಸಲೀಂ ಪಿಂಜಾರಿ ಆಗಿದ್ದಾರೆ" ಎಂದು #AlwaysOnDuty #MumbaiPolice4All ಎಂಬ ಹ್ಯಾಶ್ ಟ್ಯಾಗ್‌ನೊಂದಿಗೆ ಬರೆದುಕೊಂಡಿದ್ದಾರೆ.

Full View

ವಿಜಯೋತ್ಸವ ಮೆರವಣಿಗೆಯ ವೈರಲ್ ವಿಡಿಯೊದಲ್ಲಿ ಜನರ ಗುಂಪಿನಲ್ಲಿ ಸಿಲುಕಿಕೊಂಡು ಪ್ರಜ್ಞಾಹೀನರಾಗಿದ್ದ ಮಹಿಳೆಯೊಬ್ಬರನ್ನು ಪೊಲೀಸ್ ಕಾನ್‌ಸ್ಟೇಬಲ್ ಸಲೀಂ ಪಿಂಜಾರಿ ಮೇಲೆತ್ತುತ್ತಿರುವ ದೃಶ್ಯ ಸೆರೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News