ಸಿಎಂ ಬಿರೇನ್ ಸಿಂಗ್ ಮಣಿಪುರ ಹಿಂಸಾಚಾರದ ʼಮಾಸ್ಟರ್ ಮೈಂಡ್ʼ: ಕುಕಿ ಶಾಸಕರ ಆರೋಪ

Update: 2024-11-11 10:29 GMT

ಬಿರೇನ್ ಸಿಂಗ್ (Photo: PTI)

ಹೊಸದಿಲ್ಲಿ: ಮಣಿಪುರ ಸಿಎಂ ಬಿರೇನ್ ಸಿಂಗ್ ಮಣಿಪುರ ಹಿಂಸಾಚಾರದ ʼಮಾಸ್ಟರ್ ಮೈಂಡ್ʼ (ರೂವಾರಿ) ಆಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಕುಕಿ ಸಮುದಾಯದ ಶಾಸಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಸಾಲಿಸಿಟರ್ ಜನರಲ್ ಸುಪ್ರೀಂ ಕೋರ್ಟ್‌ ಗೆ ಸುಳ್ಳು ಹೇಳಿದ್ದಾರೆ ಎಂದು ಕುಕಿ ಶಾಸಕರು ಆರೋಪಿಸಿದ್ದಾರೆ.

ಪೋಲಿಯೆನ್ಲಾಲ್ ಹಾಕಿಪ್ ಸೇರಿದಂತೆ 10 ಶಾಸಕರು ಸಹಿ ಮಾಡಿದ ಹೇಳಿಕೆಯಲ್ಲಿ, ನವೆಂಬರ್ 8 ರಂದು ಸುಪ್ರೀಂ ಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ ಭಾರತದ ಸಾಲಿಸಿಟರ್ ಜನರಲ್ ಅವರು ಮುಖ್ಯಮಂತ್ರಿ ಅವರು ಪರಿಸ್ಥಿತಿಯನ್ನು ಶಾಂತಗೊಳಿಸಲು ಎಲ್ಲಾ ಕುಕಿ ಶಾಸಕರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಿರುವುದು ತಿಳಿದು ಬಂದಿದೆ, ಇದು ಅವಾಸ್ತವಿಕವಾಗಿದೆ. ಮೈತೈ ಮತ್ತು ಕುಕಿ ಬುಡಕಟ್ಟು ಜನಾಂಗದವರ ನಡುವೆ ಜನಾಂಗೀಯ ಹಿಂಸಾಚಾರ ಸಂಭವಿಸಿದ ನಂತರ ಕಳೆದ 18 ತಿಂಗಳುಗಳಲ್ಲಿ ಮಣಿಪುರ ಮುಖ್ಯಮಂತ್ರಿಯನ್ನು ಭೇಟಿ ಮಾಡಿಲ್ಲ. ಸಾಲಿಸಿಟರ್ ಜನರಲ್ ಹೇಳಿಕೆಯು "ಸುಪ್ರೀಂಕೋರ್ಟ್ ಅನ್ನು ತಪ್ಪುದಾರಿಗೆಳೆಯುವಂತಿದೆ" ಎಂದು ಶಾಸಕರು ಪ್ರತಿಪಾದಿಸಿದ್ದಾರೆ.

ನಾವು 2023ರ ಮೇ 3ರಿಂದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರೊಂದಿಗೆ ಯಾವುದೇ ಸಭೆ ನಡೆಸಿಲ್ಲ. ಹಿಂಸಾಚಾರದ ಹಿಂದಿನ ಮಾಸ್ಟರ್ ಮೈಂಡ್ ಆಗಿರುವುದರಿಂದ ಭವಿಷ್ಯದಲ್ಲಿ ಅವರನ್ನು ಭೇಟಿ ಮಾಡುವ ಯಾವುದೇ ಉದ್ದೇಶವನ್ನು ಕೂಡ ಹೊಂದಿಲ್ಲ ಎಂದು ಸ್ಪಷ್ಟಪಡಿಸುತ್ತೇವೆ. ಈ ಹಿಂಸಾಚಾರ ಇಂದಿನವರೆಗೂ ಮುಂದುವರಿದಿದೆ. ಇದರಲ್ಲಿ ಇತ್ತೀಚಿನದ್ದು 2024ರ ನ.7ರಂದು ಝೊಸಾಂಗ್ಕಿಮ್ ಹ್ಮಾರ್ ಅವರನ್ನು ಕ್ರೂರವಾಗಿ ಕೊಂದು ಸುಟ್ಟುಹಾಕಿರುವುದಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.


Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News