10 ವರ್ಷಗಳ ಜೈಲುವಾಸದ ಬಳಿಕ ದೋಷಮುಕ್ತರಾಗಿ ಜೈಲಿನಿಂದ ಹೊರಬಂದ ಪ್ರೊ. ಜಿ.ಎನ್. ಸಾಯಿಬಾಬಾ

Update: 2024-03-07 06:23 GMT

ಹೊಸದಿಲ್ಲಿ: ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದಲ್ಲಿ ಸೆರೆವಾಸದಲ್ಲಿದ್ದ ದಿಲ್ಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿ.ಎನ್.ಸಾಯಿಬಾಬಾ ಅವರು ಹತ್ತು ವರ್ಷಗಳ ಜೈಲುವಾಸದ ಬಳಿಕ ದೋಷಮುಕ್ತರಾಗಿ ನಾಗಪುರ ಸೆಂಟ್ರಲ್ ಜೈಲಿನಿಂದ ಹೊರಗಡೆ ಬಂದಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠವು ಪ್ರೊ. ಸಾಯಿಬಾಬಾ ಹಾಗೂ ಇನ್ನಿತರ ಐದು ಮಂದಿ ಆರೋಪಿಗಳನ್ನು ಮಾರ್ಚ್ 5ರಂದು ದೋಷಮುಕ್ತಗೊಳಿಸಿತ್ತು. ಈ ಆದೇಶದ ವಿರುದ್ಧ ಮಹಾರಾಷ್ಟ್ರ ಸರಕಾರವು ಮತ್ತೊಮ್ಮೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.

ಪ್ರೊ. ಜಿ.ಎನ್.ಸಾಯಿಬಾಬಾ ಹಾಗೂ ಇನ್ನಿತರ ಐವರನ್ನು 2014ರಲ್ಲಿ ಬಂಧಿಸಲಾಗಿತ್ತು. ಅವರಿಗೆ ಸಿಪಿಐ (ಮಾವೋವಾದಿ) ಪಕ್ಷದೊಂದಿಗೆ ಸಂಪರ್ಕವಿದೆ ಹಾಗೂ ಆರ್‌ಡಿಎಫ್‌ನಂತಹ ಸಂಘಟನೆಗಳ ಮೂಲಕ ಅದರ ಪರ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಅವರಿಂದ ವಶಪಡಿಸಿಕೊಳ್ಳಲಾದ ಕರಪತ್ರಗಳು ಹಾಗೂ ಇತರ ವಿದ್ಯುನ್ಮಾನ ಸಾಧನಗಳು ದೇಶ ವಿರೋಧಿ ಅಂಶಗಳನ್ನು ಒಳಗೊಂಡಿದ್ದವು ಎಂದು ಪ್ರಾಸಿಕ್ಯೂಷನ್ ಪರ ವಕೀಲರು ಗಡ್ಚಿರೋಲಿ ಸೆಷನ್ಸ್ ನ್ಯಾಯಾಲಯದಲ್ಲಿ ವಾದಿಸಿದ್ದರು.

ಸಾಯಿಬಾಬಾ ಹಾಗೂ ಇನ್ನಿತರ ಐದು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ಗಡ್ಚಿರೋಲಿ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠವು ವಜಾಗೊಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News