ರೈತರ ಕುರಿತು ಕಂಗನಾ ಕೀಳುಮಟ್ಟದ ಹೇಳಿಕೆ ನೀಡುವಾಗ ನನ್ನ ತಾಯಿಯೂ ಆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು : CISF ಮಹಿಳಾ ಕಾನ್ಸ್‌ಟೇಬಲ್‌

Update: 2024-06-06 19:24 IST
ರೈತರ ಕುರಿತು ಕಂಗನಾ ಕೀಳುಮಟ್ಟದ ಹೇಳಿಕೆ ನೀಡುವಾಗ ನನ್ನ ತಾಯಿಯೂ ಆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು : CISF ಮಹಿಳಾ ಕಾನ್ಸ್‌ಟೇಬಲ್‌

ಕಂಗನಾ ರಾಣಾವತ್ | Screengrab: X \ @shahnawazsadiqu

  • whatsapp icon

ಚಂಡೀಗಢ : "ರೈತರು 100 ರೂ. ಗಾಗಿ ಕುಳಿತಿದ್ದಾರೆ ಎಂದು ಪ್ರತಿಭಟನಾ ನಿರತ ರೈತರ ಬಗ್ಗೆ ಕಂಗನಾ ರಾಣಾವತ್ ಹೇಳಿಕೆ ನೀಡಿದ್ದರು” ಎಂದು, ಕಂಗನಾ ರಾಣಾವತ್ ಗೆ ಕಪಾಳಮೋಕ್ಷ ಮಾಡಿದ CISF ಕಾನ್ಸ್ಟೇಬಲ್ ಕುಲ್ವಿಂದರ್ ಕೌರ್ ಹೇಳಿದ್ದಾರೆ.

“ಕಂಗನಾ ಕೀಳುಮಟ್ಟದ ಹೇಳಿಕೆ ನೀಡಿದಾಗ ನಡೆಯುತ್ತಿದ್ದ ರೈತರ ಪ್ರತಿಭಟನೆಯಲ್ಲಿ ನನ್ನ ತಾಯಿಯೂ ಕುಳಿತು ಪ್ರತಿಭಟನೆ ನಡೆಸುತ್ತಿದ್ದರು. ರೈತರು 100 ರೂ. ಗಾಗಿ ಕುಳಿತಿದ್ದಾರೆ ಎಂದು ಹೇಳಿಕೆ ನೀಡಿದ ಆಕೆ ಅಲ್ಲಿಗೆ ಹೋಗಿ ಕುಳಿತುಕೊಳ್ಳುತ್ತಾರಾ?” ಎಂದು ಕುಲ್ವಿಂದರ್ ಕೌರ್ ಪ್ರಶ್ನಿಸಿದ್ದಾರೆ.

ಸಿಐಎಸ್ಎಫ್ ಕಾನ್ಸ್ಟೇಬಲ್ ಕುಲ್ವಿಂದರ್ ಕೌರ್ ಅವರು ದಿಲ್ಲಿಗೆ ವಿಮಾನವೇರಲು ಚಂಡೀಗಢ ವಿಮಾನ ನಿಲ್ದಾಣಕ್ಕೆ ಬಂದಾಗ ತಮಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿಯ ಸಂಸದರಾಗಿ ಆಯ್ಕೆಯಾಗಿರುವ ಕಂಗನಾ ರನೌತ್ ಆರೋಪಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News