ಚೀತಾಗಳನ್ನು ಮಧ್ಯಪ್ರದೇಶದಿಂದ ಸ್ಥಳಾಂತರಿಸುವ ಯಾವುದೇ ಯೋಜನೆ ಇಲ್ಲ: ಕೇಂದ್ರ ಸಚಿವ ಭೂಪೇಂದರ್ ಯಾದವ್

Update: 2023-08-06 06:29 GMT

Bhupendra Yadav. Credit: PTI Photo


ಹೊಸದಿಲ್ಲಿ: ಮಧ್ಯಪ್ರದೇಶದ ಶಿಯೋಪುರ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನದಿಂದ (ಕೆಎನ್ಪಿ) ಚಿರತೆಗಳನ್ನು ಸ್ಥಳಾಂತರಿಸುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಸಚಿವ ಭೂಪೇಂದರ್ ಯಾದವ್ ಹೇಳಿದ್ದಾರೆ.

ಚೀತಾ ಮರುಪರಿಚಯ ಯೋಜನೆಯ ಸೂಕ್ಷ್ಮತೆಯನ್ನು ಸರಕಾರ ಒಪ್ಪಿಕೊಂಡಿದೆ ಮತ್ತು ಇದು ಸಂಪೂರ್ಣ ಯಶಸ್ವಿಯಾಗಬೇಕೆಂದು ಬಯಸುತ್ತದೆ ಎಂದು ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆಯ ಸಚಿವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ಈ ವರ್ಷದ ಮಾರ್ಚ್ ನಿಂದ ಕೆಎನ್ ಪಿಯಲ್ಲಿ ಮೂರು ಮರಿಗಳು ಸೇರಿದಂತೆ ಒಟ್ಟು ಒಂಬತ್ತು ಚೀತಾಗಳು ಸಾವನ್ನಪ್ಪಿವೆ ಎಂಬುದು ಗಮನಾರ್ಹ.

ಕೆಎನ್ ಪಿಯಿಂದ ಚೀತಾಗಳ ಸ್ಥಳಾಂತರ ಕುರಿತ ಪ್ರಶ್ನೆಗೆ ಉತ್ತರಿಸಿದ ಯಾದವ್, "ಇದಕ್ಕೆ ಯಾವುದೇ ಯೋಜನೆ ನಡೆಯುತ್ತಿಲ್ಲ... ಸ್ವಾಭಾವಿಕವಾಗಿ, ಮುಂಗಾರು ಮಳೆಯಿಂದಾಗಿ ಕೀಟಗಳಿಂದ ಉಂಟಾಗುವ ಸೋಂಕು ನಮ್ಮ ಗಮನಕ್ಕೆ ಬಂದಿದೆ. ಈ ಸೋಂಕಿನಿಂದಾಗಿ ನಾವು ಎರಡು ಚಿರತೆಗಳನ್ನು ಕಳೆದುಕೊಂಡಿದ್ದೇವೆ. ನಾವು ದಕ್ಷಿಣ ಆಫ್ರಿಕಾ, ನಮೀಬಿಯಾದ ತಜ್ಞರೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದೇವೆ. ನಾವು ಅದರ ನಿರ್ವಹಣೆಯಲ್ಲಿ ಮುಂದುವರಿಯುತ್ತಿದ್ದೇವೆ’’ ಎಂದರು.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News