ವಿಧಿ 370 ರದ್ದುಗೊಳಿಸಿ ಹೊರಡಿಸಿದ ರಾಷ್ಟ್ರಪತಿಗಳ ಅಧ್ಯಾದೇಶ ಮಾನ್ಯ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Update: 2023-12-11 08:50 GMT

ಹೊಸದಿಲ್ಲಿ: ಜಮ್ಮು ಕಾಶ್ಮೀರದಲ್ಲಿ ವಿಧಿ 370 ಅನ್ನು ರದ್ದುಗೊಳಿಸಿ ಹೊರಡಿಸಲಾದ ರಾಷ್ಟ್ರಪತಿಗಳ ಅಧ್ಯಾದೇಶ ಮಾನ್ಯವಾಗಿದೆ ಎಂದು ಸುಪ್ರೀಂ ಕೋರ್ಟ್‌ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ.

ಭಾರತದ ಸಂವಿಧಾನದ ಎಲ್ಲಾ ನಿಬಂಧನೆಗಳನ್ನು ಜಮ್ಮು ಕಾಶ್ಮೀರಕ್ಕೆ ವಿಧಿ 370(1)(ಡಿ) ಬಳಸಿ ಅನ್ವಯಿಸಬಹುದು ಎಂದು ಸುಪ್ರೀಂ ಕೋರ್ಟ್‌ ಇಂದು ತೀರ್ಪು ಪ್ರಕಟಿಸಿದೆ. ರಾಷ್ಟ್ರಪತಿಗಳ ಅಧಿಕಾರ ಚಲಾಯಿಸುವಾಗ ಚರ್ಚೆ ಮತ್ತು ಸಹಭಾಗಿತ್ವದ ತತ್ವದ ಅಗತ್ಯವಿಲ್ಲ. ಸಂವಿಧಾನದ ವಿಧಿ 370(1)(ಡಿ) ಬಳಸಿ ಅನ್ವಯಿಸುವ ಎಲ್ಲಾ ನಿಬಂಧನೆಗಳಿಗೆ ರಾಜ್ಯದ ಒಪ್ಪಿಗೆ ಬೇಕಿಲ್ಲ ಎಂದು ಸಿಜೆಐ ಹೇಳಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಸೆಪ್ಟೆಂಬರ್‌ 30, 2024ರೊಳಗಾಗಿ ಚುನಾವಣೆ ನಡೆಸಬೇಕು ಹಾಗೂ ಜಮ್ಮು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಆದಷ್ಟು ಬೇಗ ಮರುಸ್ಥಾಪಿಸಬೇಕೆಂದೂ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.

ಜಮ್ಮು ಕಾಶ್ಮೀರ ರಚನಾ ಸಭೆಯು ಖಾಯಂ ಸಂಸ್ಥೆಯಾಗಿರಲಿಲ್ಲ. ಸಂವಿಧಾನ ರಚನೆಗಾಗಿ ಮಾತ್ರ ಅದನ್ನು ರಚಿಸಲಾಗಿತ್ತು.

ರಾಜ್ಯದಲ್ಲಿನ ಯುದ್ಧ ರೀತಿಯ ಪರಿಸ್ಥಿತಿಯ ಕಾರಣದಿಂದ ವಿಧಿ 370 ಒಂದು ತಾತ್ಕಾಲಿಕ ಏರ್ಪಾಟಾಗಿತ್ತು. ಭಾರತದೊಂದಿಗೆ ವಿಲೀನದ ನಂತರ ಅದು ತನ್ನ ಸಂಪೂರ್ಣ ಸಾರ್ವಭೌಮತ್ವವನ್ನು ಒಪ್ಪಿಸಿತ್ತು. ಜಮ್ಮು ಕಾಶ್ಮೀರ ಭಾರತದ ಭಾಗವಾದಾಗ ಅದು ಸಾರ್ವಭೌಮತ್ವ ಉಳಿಸಿಕೊಂಡಿರಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News