ವಿರೋಧ ಪಕ್ಷಗಳ 'I.N.D.I.A' ಸಂಕ್ಷಿಪ್ತ ರೂಪದ ಬಳಕೆಯ ವಿರುದ್ಧ ಪಿಐಎಲ್ : ನೋಟಿಸ್ ಜಾರಿ ಮಾಡಿದ ದಿಲ್ಲಿ ಹೈಕೋರ್ಟ್

Update: 2023-08-04 08:39 GMT

ಹೊಸದಿಲ್ಲಿ: ಹೊಸದಾಗಿ ರಚಿಸಲಾದ 26 ವಿರೋಧ ಪಕ್ಷಗಳ ಮೈತ್ರಿಕೂಟ I.N.D.I.A (ಇಂಡಿಯನ್ ನ್ಯಾಷನಲ್ ಡೆವಲಪ್ ಮೆಂಟಲ್ ಇನ್ ಕ್ಲೂಸಿವ್ ಅಲೈಯನ್ಸ್) ಎಂಬ ಸಂಕ್ಷಿಪ್ತ ರೂಪದ ಬಳಕೆಯ ವಿರುದ್ಧ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ ಸಂಬಂಧಿಸಿ ದಿಲ್ಲಿ ಹೈಕೋರ್ಟ್ ಶುಕ್ರವಾರ ನೋಟಿಸ್ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಹಾಗೂ ನ್ಯಾಯಮೂರ್ತಿ ಅಮಿತ್ ಮಹಾಜನ್ ಅವರ ವಿಭಾಗೀಯ ಪೀಠವು ಗೃಹ ವ್ಯವಹಾರಗಳು ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯಗಳು, ಭಾರತೀಯ ಚುನಾವಣಾ ಆಯೋಗ ಹಾಗೂ 26 ರಾಜಕೀಯ ಪಕ್ಷಗಳ ಮೂಲಕ ಕೇಂದ್ರ ಸರಕಾರದಿಂದ ಪ್ರತಿಕ್ರಿಯೆ ಕೇಳಿದೆ.

‘’ಈ ಅರ್ಜಿಯನ್ನು ಆಲಿಸಬೇಕು. ಇದಕ್ಕೆ ವಿಚಾರಣೆಯ ಅಗತ್ಯವಿದೆ”ಎಂದು ಅಕ್ಟೋಬರ್ 21 ರಂದು ವಿಚಾರಣೆಗೆ ವಿಷಯವನ್ನು ಪಟ್ಟಿ ಮಾಡುತ್ತಿದ್ದಂತೆ ಪೀಠವು ಹೇಳಿದೆ.

ಇಲ್ಲಿಯವರೆಗೆ ಭಾರತದ ಚುನಾವಣಾ ಆಯೋಗವು ಪ್ರತಿವಾದಿ ರಾಜಕೀಯ ಪಕ್ಷಗಳು I.N.D.I.A ಎಂಬ ಸಂಕ್ಷಿಪ್ತ ರೂಪವನ್ನು  ರಾಜಕೀಯ ಮೈತ್ರಿ ಕೂಟಕ್ಕೆ ಬಳಸುವುದನ್ನು ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ, ಆದ್ದರಿಂದ ಅರ್ಜಿದಾರರಿಗೆ ಈ ರಿಟ್ ಅರ್ಜಿಯನ್ನು ಸಲ್ಲಿಸುವುದನ್ನು ಹೊರತುಪಡಿಸಿ ಬೇರೆ ಆಯ್ಕೆಗಳಿರಲಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News