ತಮ್ಮ ಜನ್ಮದಿನದಂದು ‘ಯಶೋಭೂಮಿ’ ಕನ್ವೆನ್ಷನ್ ಸೆಂಟರ್ ನ ಮೊದಲ ಹಂತ ಉದ್ಘಾಟಿಸಲಿರುವ ಪ್ರಧಾನಿ ಮೋದಿ

Update: 2023-09-16 08:06 GMT

Yashobhoomi, the India International Convention and Expo Centre (IICC). (PTI)

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನದಂದು ದ್ವಾರಕಾದಲ್ಲಿ ಯಶೋಭೂಮಿ ಎಂಬ ಹೆಸರಿನ ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ ನ (ಐಐಸಿಸಿ) ಮೊದಲ ಹಂತವನ್ನು ರವಿವಾರ ಉದ್ಘಾಟಿಸುವ ನಿರೀಕ್ಷೆಯಿದೆ.

ಮೋದಿ ಅವರು ದ್ವಾರಕಾ ಸೆಕ್ಟರ್ 21 ರಿಂದ ದ್ವಾರಕಾ ಸೆಕ್ಟರ್ 25 ರಲ್ಲಿ ಹೊಸ ಮೆಟ್ರೋ ನಿಲ್ದಾಣಕ್ಕೆ ದಿಲ್ಲಿ ಏರ್ ಪೋರ್ಟ್ ಮೆಟ್ರೋ ಎಕ್ಸ್ಪ್ರೆಸ್ ಮಾರ್ಗದ ವಿಸ್ತರಣೆಯನ್ನು ಸಮರ್ಪಿಸುವ ಸಾಧ್ಯತೆಯಿದೆ.

4,400 ಕೋಟಿ ರೂ. ವೆಚ್ಚದಲ್ಲಿ 73,000 ಚದರ ಮೀಟರ್ ಗಿಂತಲೂ ಹೆಚ್ಚು ವಿಸ್ತಾರವಾದ ಪ್ರದೇಶದಲ್ಲಿ ನಿರ್ಮಿಸಲಾದ ಯಶೋಭೂಮಿ ಕೇಂದ್ರವು ಮುಖ್ಯ ಸಭಾಂಗಣ ಸೇರಿದಂತೆ 15 ಸಮಾವೇಶ ಕೊಠಡಿಗಳನ್ನು ಒಳಗೊಂಡಿದೆ. ಇದು ಭವ್ಯವಾದ ಬಾಲ್ ರೂಂ ಹಾಗೂ ಒಟ್ಟು 11,000 ಪ್ರತಿನಿಧಿಗಳ ಸಾಮರ್ಥ್ಯದ 13 ಸಭೆ ಕೊಠಡಿಗಳನ್ನು ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News