ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಆರೋಪಿಗಳ ಬಿಡುಗಡೆ: ಸುಪ್ರೀಂ ಕೋರ್ಟ್ ಹೇಳಿದ್ದೇನು?

Update: 2023-08-09 04:27 GMT

ಹೊಸದಿಲ್ಲಿ: ಬಿಲ್ಕಿಸ್ ಬಾನು ಮೇಲೆ 2002ರ ಗುಜರಾತ್ ಗಲಭೆ ವೇಳೆ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೇ ಅವರ ಕುಟುಂಬದ ಏಳು ಮಂದಿ ಸದಸ್ಯರನ್ನು ಹತ್ಯೆ ಮಾಡಿದ ಪ್ರಕರಣದ ಎಲ್ಲ 11 ಮಂದಿ ಆರೋಪಿಗಳ ಶಿಕ್ಷೆ ಇಳಿಸಿ ಜೈಲಿನಿಂದ ಬಿಡುಗಡೆ ಮಾಡಿರುವ ಕ್ರಮದ ಕಾನೂನು ಬದ್ಧತೆಯನ್ನು ಪರಾಮರ್ಶಿಸುವ ಪ್ರಕ್ರಿಯೆಯನ್ನು ಮಂಗಳವಾರ ಆರಂಭಿಸಿದ ಸುಪ್ರೀಂಕೋರ್ಟ್, ಸಾರ್ವಜನಿಕ ಆಕ್ರೋಶ ನ್ಯಾಯಾಂಗ ನಿರ್ಧಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ಜಲ್ ಭೂಯಾನ್ ಅವರನ್ನೊಳಗೊಂಡ ನ್ಯಾಯಪೀಠ, "ಪ್ರತಿಭಟನೆಗಳು ಮತ್ತು ಆಕ್ರೋಶ ನಮ್ಮ ನಿರ್ಧಾರದ ಮೇಲೆ ಪ್ರಭಾವ ಬೀರುವುದಿಲ್ಲ. ಕೇವಲ ಕಾನೂನು ಪ್ರಕಾರವಷ್ಟೇ ನಿರ್ಧರಿಸಲಾಗುತ್ತದೆ" ಎಂದು ಸ್ಪಷ್ಟಪಡಿಸಿದೆ.

"ಒಂದು ವೇಳೆ ಯಾವುದೇ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿಲ್ಲ ಅಂದುಕೊಳ್ಳೋಣ. ಆಗ ಆದೇಶವನ್ನು ನಾವು ಎತ್ತಿ ಹಿಡಿಯುತ್ತೇವೆಯೇ? ಒಂದು ವೇಳೆ ಸಾರ್ವಜನಿಕ ಆಕ್ರೋಶ ವ್ಯಕ್ತವಾದಲ್ಲಿ ಅದು ತಪ್ಪು ಆದೇಶ ಎಂಬ ಅರ್ಥವೇ? ಎಂದು ಬಿಲ್ಕಿಸ್ ಬಾನು ಪರವಾಗಿ ಹಾಜರಾದ ವಕೀಲೆ ಶೋಭಾ ಗುಪ್ತಾ ಅವರನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ಶಿಕ್ಷಿತರಿಗೆ ಶಿಕ್ಷೆ ಪ್ರಮಾಣವನ್ನು ಮಂಜೂರು ಮಾಡುವ ವಿಚಾರದಲ್ಲಿ ಸಾರ್ವಜನಿಕ ಆಕ್ರೋಶವನ್ನು ಪ್ರಮುಖ ಅಂಶವಾಗಿ ಪರಿಗಣಿಬೇಕು ಎಂದು ವಕೀಲರು ವಾದ ಮಂಡಿಸಿದಾಗ ನ್ಯಾಯಪೀಠ ಈ ಪ್ರಶ್ನೆ ಕೇಳಿದೆ. ಇವರ ಬಿಡುಗಡೆ ಬಳಿಕ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ ಎಂಬ ವಾದವನ್ನು ವಕೀಲರು ಮಂಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News