ಓವರ್ ಟೇಕ್ ಭರದಲ್ಲಿ ಆಟೊ, ಬೈಕ್ ಗಳಿಗೆ ಸ್ಕಾರ್ಪಿಯೊ ಢಿಕ್ಕಿ: 7 ಮಂದಿ ಮೃತ್ಯು

Update: 2024-01-27 02:29 GMT

ಹೊಸದಿಲ್ಲಿ: ಅತಿವೇಗದಿಂದ ಚಲಿಸುತ್ತಿದ್ದ ಎಸ್ ಯುವಿ ಸ್ಕಾರ್ಪಿಯೊ ಸಿಂಗಲ್ ಲೇನ್ ರಸ್ತೆಯಲ್ಲಿ ಎರಡು ಮೋಟರ್ ಸೈಕಲ್ ಗಳು ಹಾಗೂ ಒಂದು ಆಟೊರಿಕ್ಷಾಗೆ ಢಿಕ್ಕಿ ಹೊಡೆದು ಸಂಭವಿಸಿದ ದುರಂತದಲ್ಲಿ ಏಳು ಮಂದಿ ಮೃತಪಟ್ಟಿರುವ ಘಟನೆ ಒಡಿಶಾದ ಬಿಜಾಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಟ್ರ್ಯಾಕ್ಟರ್ ಗೆ ಕೂಡಾ ಢಿಕ್ಕಿ ಹೊಡೆದಿದ್ದು, ಸಿಂಗಲ್ ಲೇನ್ ರಸ್ತೆಯಲ್ಲಿ ಈ ಸ್ಕಾರ್ಪಿಯೊ ಅತಿವೇಗದಿಂದ ಬರುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಕಾಣಿಸುತ್ತಿದೆ.

ಕಾಣಿಸುತ್ತಿದ್ದು, ರಿಕ್ಷಾವೊಂದನ್ನು ಓವರ್ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಎರಡು ಬೈಕ್ ಗಳಿಗೆ ಢಿಕ್ಕಿ ಹೊಡೆದಿದೆ. ಆಟೊರಿಕ್ಷಾದಲ್ಲಿ 15 ಮಂದಿ ಇದ್ದರು ಎನ್ನಲಾಗಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟರು. ಇತರ ನಾಲ್ಕು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಜೀವ ಕಳೆದುಕೊಂಡಿದ್ದಾರೆ.

ಘಟನೆಯ ಬಗ್ಗೆ ಬಿಜಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News