ಹಿಂಡೆನ್ ಬರ್ಗ್ ನಿಂದ ಸ್ಫೋಟಕ ವರದಿ ಬರುತ್ತಿದ್ದಂತೆ ಸೆಬಿ ಎಕ್ಸ್ ಖಾತೆ ಲಾಕ್!
ಹೊಸದಿಲ್ಲಿ : ಹಿಂಡೆನ್ ಬರ್ಗ್ ನಿಂದ ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಅವರ ಕುರಿತ ಸ್ಫೋಟಕ ವರದಿ ಬರುತ್ತಿದ್ದಂತೆ ಸೆಬಿಯ ಅಧಿಕೃತ ಎಕ್ಸ್ ಖಾತೆ ಲಾಕ್ ಆಗಿದೆ ಎಂದು ತಿಳಿದು ಬಂದಿದೆ.
ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಅವರು ಅದಾನಿ ಗ್ರೂಪ್ ತನ್ನ ಷೇರುಗಳ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಲು ಬಳಸುತ್ತಿದ್ದ ವಿದೇಶಿ ನಿಧಿಗಳಲ್ಲಿ ಹೂಡಿಕೆಗಳನ್ನು ಹೊಂದಿದ್ದರು ಎಂದು ಹಿಂಡೆನ್ ಬರ್ಗ್ ಆರೋಪಿಸಿದೆ. ಉದ್ಯಮ ದಿಗ್ಗಜ ಗೌತಮ ಅದಾನಿಯನ್ನು ಗುರಿಯಾಗಿಸಿಕೊಂಡ ಒಂದೂವರೆ ವರ್ಷಗಳ ಬಳಿಕ ಅಮೆರಿಕ ಮೂಲದ ಹಿಂಡೆನ್ಬರ್ಗ್ ರೀಸರ್ಚ್, ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಅವರು ಅದಾನಿ ಗ್ರೂಪ್ ತನ್ನ ಷೇರುಗಳ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಲು ಬಳಸುತ್ತಿದ್ದ ವಿದೇಶಿ ನಿಧಿಗಳಲ್ಲಿ ಹೂಡಿಕೆಗಳನ್ನು ಹೊಂದಿದ್ದರು ಎಂದು ವರದಿ ಹೇಳಿದೆ.
ಸೆಬಿಯ ಎಕ್ಸ್ ಖಾತೆ ಲಾಕ್ ಆಗಿರುವ ಕುರಿತು, ಎಕ್ಸ್ ಬಳಕೆದಾರ @mr_mayank ಎಂಬವರು, “ಬಿಗ್ಗೆಸ್ಟ್ ಬ್ರೇಕಿಂಗ್. ಇತ್ತೀಚಿನ #HindenbergReport ಬಹಿರಂಗಗೊಂಡ ನಂತರ SEBI ತನ್ನ Twitter ಖಾತೆಯನ್ನು ಲಾಕ್ ಮಾಡಿದೆ. ಅದಾನಿ ಮತ್ತು ಅವರ ಸ್ನೇಹಿತರು ಇಬ್ಬರೂ ಪ್ಯಾನಿಕ್ ಮೂಡ್‌ನಲ್ಲಿದ್ದಾರೆ ಎಂದು ವರದಿಯಾಗಿದೆ. ಶೀಘ್ರದಲ್ಲೇ ಓಡಿಹೋಗಲು ಯೋಜಿಸುತ್ತಿರುವಿರಾ?” ಎಂದು ಪೋಸ್ಟ್ ಮಾಡಿದ್ದಾರೆ.