ಅಜಿತ್‌ ಪವಾರ್‌, ಪ್ರಫುಲ್‌ ಪಟೇಲ್‌, ಇತರ 9 ಶಾಸಕರನ್ನು ಎನ್‌ಸಿಪಿ ಪಕ್ಷದಿಂದ ಉಚ್ಛಾಟಿಸಿದ ಶರದ್‌ ಪವಾರ್

Update: 2023-07-06 13:54 GMT

ಶರದ್‌ ಪವಾರ್ (Photo: ANI)

ಹೊಸದಿಲ್ಲಿ: ಇಂದು ದಿಲ್ಲಿಯಲ್ಲಿ ಶರದ್‌ ಪವಾರ್‌ ನೇತೃತ್ವದಲ್ಲಿ ನಡೆದ ಎನ್‌ಸಿಪಿ ಕಾರ್ಯಕಾರಿ ಸಮಿತಿ ಸಭೆಯು ಪಕ್ಷದ ವಿರುದ್ಧ ಬಂಡಾಯ ಸಾರಿದ ಹಾಗೂ ಈಗ ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿರುವ ಅಜಿತ್‌ ಪವಾರ್‌, ಪ್ರಫುಲ್‌ ಪಟೇಲ್‌ ಮತ್ತು ಒಂಬತ್ತು ಮಂದಿ ಶಾಸಕರನ್ನು ಎನ್‌ಸಿಪಿಯಿಂದ ಉಚ್ಛಾಟಿಸಿದೆ.

ನಂತರ ಮಾಧ್ಯಮದ ಜೊತೆ ಮಾತನಾಡಿದ ಶರದ್‌ ಪವಾರ್‌, ಸಭೆಯಲ್ಲಿ ಭಾಗವಹಿಸಿದ ಎಲ್ಲರೂ ಪಕ್ಷವನ್ನು ಬಲಪಡಿಸುವ ಇಚ್ಛೆ ವ್ಯಕ್ತಪಡಿಸಿದರು ಎಂದರು. ಬಂಡಾಯದಿಂದ ಪಕ್ಷಕ್ಕೆ ನೋವಾಗಿದ್ದರೂ ಇದು ಪಕ್ಷದ ಬಲವರ್ಧನೆಗೆ ಕಾರಣವಾಗಲಿದೆ ಎಂದರು. ತಮ್ಮ ವಯಸ್ಸಿನ ಕುರಿತು ಅಜಿತ್‌ ಪವಾರ್‌ ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶರದ್‌ ಪವಾರ್‌, ವಯಸ್ಸು 82 ಆಗಿರಲಿ, 92 ಆಗಿರಲಿ, ಅದು ಮಹತ್ವವಲ್ಲ ಎಂದರು.

ಆದರೆ ಇಂದು ನಡೆದ ಎನ್‌ಸಿಪಿ ಸಭೆ 'ಅಕ್ರಮ'ವಾಗಿದೆ ಎಂದು ಅಜಿತ್‌ ಪವಾರ್‌ ಬಣ್ಣಿಸಿದ್ದಾರೆ. ತಾವು ನಿಜವಾದ ಎನ್‌ಸಿಪಿಯನ್ನು ಪ್ರತಿನಿಧಿಸುತ್ತಿರುವುದರಿಂದ ಪಕ್ಷದ ಹೆಸರು, ಚಿಹ್ನೆ ತಮಗೆ ನೀಡಬೇಕು ಎಂದು ತಾವು ಚುನಾವಣಾ ಆಯೋಗದ ಮುಂದೆ ಅಪೀಲು ಸಲ್ಲಿಸಿರುವುದರಿಂದ ಈ ಕುರಿತು ಆಯೋಗ ತನ್ನ ನಿರ್ಧಾರ ಪ್ರಕಟಿಸುವ ಮುನ್ನ ಯಾರಿಗೂ ಸಭೆ ಕರೆಯುವ ಹಕ್ಕಿಲ್ಲ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News