ತೆಲಂಗಾಣ: ಹೈಕೋರ್ಟ್‌ನಲ್ಲಿ ವಾದಿಸುತ್ತಿದ್ದಾಗಲೇ ವಕೀಲ ಹೃದಯಾಘಾತದಿಂದ ಮೃತ್ಯು

Update: 2025-02-19 21:10 IST

ತೆಲಂಗಾಣ ಉಚ್ಛ ನ್ಯಾಯಾಲಯ | PC : X 

ಹೈದರಾಬಾದ್: ಪ್ರಕರಣವೊಂದರಲ್ಲಿ ವಾದಿಸುತ್ತಿದ್ದ ಹಿರಿಯ ವಕೀಲರೋರ್ವರು ಹೃದಯಘಾತದಿಂದ ಮೃತಪಟ್ಟ ಘಟನೆ ಮಂಗಳವಾರ ತೆಲಂಗಾಣ ಉಚ್ಛ ನ್ಯಾಯಾಲಯದಲ್ಲಿ ಸಂಭವಿಸಿದೆ.

ಪಸ್ನೂರು ವೇಣುಗೋಪಾಲ ರಾವ್(66) ಅವರು ಅಪರಾಹ್ನ 12:30ರ ಸುಮಾರಿಗೆ ನ್ಯಾಯಾಧೀಶ ಲಕ್ಷ್ಮೀನಾರಾಯಣ ಆಲಿಶೆಟ್ಟಿಯವರ ಮುಂದೆ ವಾದ ಮಂಡಿಸುತ್ತಿದ್ದಾಗ ಏಕಾಏಕಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದರು. ಸಹ ವಕೀಲರು ತಕ್ಷಣವೇ ಅವರಿಗೆ ಸಿಪಿಆರ್ ನಡೆಸಿ ಉಸ್ಮಾನಿಯಾ ಆಸ್ಪತ್ರೆಗೆ ಸಾಗಿಸಿದರಾದರೂ ಆ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದರು ಎಂದು ತೆಲಂಗಾಣ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಎ.ರವೀಂದ್ರ ರೆಡ್ಡಿಯವರು ಸುದ್ದಿಸಂಸ್ಥೆಗೆ ತಿಳಿಸಿದರು.

ರಾವ್ 1998ರಿಂದಲೂ ತೆಲಂಗಾಣ ಉಚ್ಛ ನ್ಯಾಯಾಲಯದಲ್ಲಿ ವಕೀಲರಾಗಿದ್ದರು

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News